ಬೆಂಗಳೂರು: ಮಾಜಿ ಸಚಿವರು ಜಮೀರ್ ಅಹಮದ್ ನಾಲಿಗೆಯಲ್ಲಿ ಮೂಳೆ ಇಲ್ಲ ಅಂತ ಏನೇನೋ ಮಾತಾಡೋದು ಸರಿಯಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಹೇಳಿಕೆಗಳೇ ಗೊಂದಲದಿಂದ ಕೂಡಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಾಗ್ದಾಳಿ ನಡೆಸಿದರು.ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಿಜಬ್ ವಿವಾದದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮಾತನಾಡಿ ಮಕ್ಕಳಿಗೆ ಸ್ವಾತಂತ್ರ್ಯ ಕೊಡಬೇಕು. ಬಿಕಿನಿ ಹೇಳಿಕೆಯೂ ಸರಿಯಲ್ಲ. ಕಾಂಗ್ರೆಸ್ ಹೇಳಿಕೆಗಳೇ ಗೊಂದಲ ಆಗಿವೆ ಎಂದು ಕಿಡಿಕಾರಿದರು.ಮುಂದಿನ ವರ್ಷದಿಂದ ಸಮವಸ್ತ್ರ ಗೊಂದಲ ಇಲ್ಲದಂತೆ ಕಾನೂನು ತರುತ್ತೇವೆ. ಹೈಕೋರ್ಟ್ ತೀರ್ಪು ಆಧರಿಸಿ ವಿಶೇಷ ಕಾನೂನು ಮುಂದಿನ ವರ್ಷದಿಂದ ಕಾನೂನು ಜಾರಿ ಮಾಡುತ್ತೇವೆ. ಇದಕ್ಕೆ ಸಂಬಂಧಿಸಿದ ಸಮಿತಿಯನ್ನು ರಚಿಸುತ್ತೇವೆ ಎಂದರು.ವಿದ್ಯಾರ್ಥಿಗಳು ಕಾಲೇಜಿಗೆ ಸಮವಸ್ತ್ರ ಧರಿಸಿ ಬರಬೇಕು. ಸಮವಸ್ತ್ರ ಇಲ್ಲದೆ ಯಾರಿಗೂ ಕಾಲೇಜಿಗೆ ಅವಕಾಶ ಇಲ್ಲ. ಹಿಜಬ್, ಕೇಸರಿ ಶಾಲು ಯಾವುದಕ್ಕೂ ಅವಕಾಶ ಇಲ್ಲ. ಹೈಕೋರ್ಟ್ ಆದೇಶ ಎಲ್ಲರೂ ಪಾಲನೆ ಮಾಡಲೇಬೇಕು ಎಂದು ಸೂಚನೆ ನೀಡಿದರು. ಇದನ್ನೂ ಓದಿ: ಹೆಣ್ಣುಮಕ್ಕಳು ಭೋಗದ ವಸ್ತುಗಳಲ್ಲ – ಜಮೀರ್ ವಿರುದ್ಧ ಮಾಳವಿಕ ಅವಿನಾಶ್ ಕಿಡಿಪೂರ್ವ ಸಿದ್ಧತೆ ಪರೀಕ್ಷೆ ಬೇಕಿದರೆ ಮತ್ತೆ ಬರೆಯಬಹುದು. ಆದರೆ ಪಬ್ಲಿಕ್ ಪರೀಕ್ಷೆ ನಿಯಮ ಮೀರಿದರೆ ಬರೆಯಲು ಸಾಧ್ಯವಿಲ್ಲ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಶಾಲೆಗೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದನ್ನೂ ಓದಿ: ಅಂತರಘಟ್ಟೆ ಜಾತ್ರೆಯಲ್ಲಿ ಎತ್ತಿನ ಗಾಡಿಗಳ ಮಧ್ಯೆ ಕಂಗೊಳಿಸಿದ ಟಗರುSign in to your account
Username or Email Address


Password

 Remember Me


