ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಮೂಲ್ಯರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೀಗ ಸ್ಯಾಂಎಲ್‍ವುಡ್ ತಾರೆಯರು ಅಮೂಲ್ಯ ಸೀಮಂತ ಪಾರ್ಟಿ ಮಾಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಅಮೂಲ್ಯರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಮನೆಯವರಲ್ಲೇ ಸೇರಿ ಮಾಡಿದ್ದರು. ಆ ಕಾರ್ಯಕ್ರಮದ ನಂತರ ಅಮೂಲ್ಯ ಸ್ನೇಹಿತರು ಸೇರಿ ಸಹ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದರಲ್ಲಿ ನಟಿಯರಾದ ರಮ್ಯಾ, ಭಾರತಿ ವಿಷ್ಣುವರ್ಧನ್, ಸುಧಾರಾಣಿ, ರಾಧಿಕಾ ಪಂಡಿತ್, ಶ್ರುತಿ, ಮಾಳವಿಕಾ ಅವಿನಾಶ್, ಗಣೇಶ್  ಮುಂತಾದರು ಭಾಗವಹಿಸಿದ್ದಾರೆ. ಈ ಫೋಟೋಗಳನ್ನು ಅಮೂಲ್ಯ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು  A post shared by Amulya (@nimmaamulya)ಪಾರ್ಟಿಯನ್ನು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಆಯೋಜಿಸಲಾಗಿತ್ತು, ರಂಗು ರಂಗಿನಿಂದ ಕೂಡಿದ್ದ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಅಮೂಲ್ಯ ಲೈಟ್ ಪಿಂಕ್ ಬಣ್ಣದ ಗೌನ್ ಧರಿಸಿ ಮಿಂಚಿದ್ದಾರೆ. ವಿಭಿನ್ನ ಥೀಮ್‍ನಲ್ಲಿ ನಡೆದ ಈ ಪಾರ್ಟಿಯಲ್ಲಿ ಹಲವಾರು ಗಣ್ಯರು ಭಾಗವಹಿಸಿ, ಅಮೂಲ್ಯಗೆ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ತುಂಬು ಗರ್ಭಿಣಿ ಅಮೂಲ್ಯಗೆ ವಿಧ-ವಿಧವಾದ ಗಿಫ್ಟ್‍ಗಳನ್ನು ನೀಡಿ, ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್  A post shared by Amulya (@nimmaamulya)ಅಮೂಲ್ಯ 2017ರಲ್ಲಿ ಜಗದೀಶ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ಅಮೂಲ್ಯ ಜಗದೀಶ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸುದ್ದಿಯನ್ನು ಅಭಿಮಾನಿಗಳಿಗೆ ಇನ್ಸ್ಟಾಗ್ರಾಂ ಮೂಲಕ ತಿಳಿಸಿದ್ದರು.Sign in to your account
Username or Email Address


Password

 Remember Me


