ಶಿವಮೊಗ್ಗ: ಸಿ.ಎಂ.ಇಬ್ರಾಹಿಂ ನನ್ನ ಗಂಡಸುತನದ ಬಗ್ಗೆ ಪ್ರಶ್ನಿಸಿದ್ದಾರೆ. ನನ್ನ ಗಂಡಸುತನ ಏನು ಎಂಬುದು ಯಾರಿಗೆ ಗೊತ್ತಿದೆಯೋ ಅವರಿಗೆ ತಿಳಿದಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಸಿ.ಎಂ.ಇಬ್ರಾಹಿಂ ವಿರುದ್ದ ವಾಗ್ದಾಳಿ ನಡೆಸಿದರು.ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ನನ್ನನ್ನು ನಾಯಿಗೆ ಹೋಲಿಸಿದ್ದಾರೆ. ನಾಯಿಗೆ ಇರುವ ನಿಯತ್ತು, ನಿಷ್ಠೆ ನಿನಗೆ ಇಲ್ಲ. ನಿನಗೆ ಜನ್ಮ ಕೊಟ್ಟಿರುವ ಸಮುದಾಯದ ನಿಷ್ಠೆ ಸಹ ಇಲ್ಲ. ನಿನಗೆ ಪಕ್ಷಕ್ಕಾಗಲಿ, ಧರ್ಮಕ್ಕಾಗಲಿ ನಿಷ್ಠೆ ಇದೆಯಾ ಎಂದು ಉಗ್ರಪ್ಪ ಏಕವಚನದಲ್ಲಿಯೇ ಇಬ್ರಾಹಿಂ ಅವರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬುಧವಾರದಿಂದ ಪಿಯು, ಪದವಿ ಕಾಲೇಜು ಆರಂಭನಿನ್ನ ಧರ್ಮದ ಆಸ್ತಿಯನ್ನೇ ನುಂಗಿ ಹಾಕಿದ್ದೀಯಾ. ಮಂತ್ರಿ ಆಗಿದ್ದಾಗ ಭ್ರಷ್ಟಾಚಾರ ಮಾಡಿಯೇ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದ. ಬ್ಲ್ಯಾಕ್ ಮೇಲ್ ರಾಜಕಾರಣಿ ಯಾರಾದರೂ ಇದ್ದರೆ ಅದು ಇಬ್ರಾಹಿಂ. ಈತ ಬೆಳಗ್ಗೆ ಸಿದ್ದರಾಮಯ್ಯ ಅಂತಾನೆ. ಮಧ್ಯಾಹ್ನ ಯಡಿಯೂರಪ್ಪ ಅಂತಾನೆ. ಸಂಜೆ ಆದರೆ ಮತ್ತೊಬ್ಬರ ಜೊತೆ ಇರುತ್ತಾನೆ. ಇಂತಹ ಮನುಷ್ಯನಿಂದ ಪಕ್ಷಕ್ಕಾಗಲಿ, ಮತ್ತೊಬ್ಬರಿಗಾಗಲಿ ಉಪಯೋಗ ಇಲ್ಲ ಎಂದರು.Sign in to your account
Username or Email Address


Password

 Remember Me


