ಬೆಂಗಳೂರು: ದರ್ಶನ್‌ (Darshan) ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ (Renukaswamy Murder Case) ಇಂದು ನಡೆದ ಸಂಪುಟ ಸಭೆಯಲ್ಲೂ (Cabinet Meeting) ಪ್ರಸ್ತಾಪವಾಗಿದೆ. ಪ್ರಕರಣದ ಕುರಿತು ಯಾರು ಮಾತಾಡಬೇಡಿ. ಅನಗತ್ಯವಾಗಿ ತುಟಿ ಬಿಚ್ಚಬೇಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಖಡಕ್‌ ಎಚ್ಚರಿಕೆ ನೀಡಿದ್ದಾರೆ.ಇಂದು ನಡೆದ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಪೊಲೀಸರು ನೀಡಿದ ಹತ್ಯೆಯ ದೃಶ್ಯಾವಳಿ ಪ್ರಸ್ತಾಪಿಸಿ ಈ ರೀತಿಯ ಕ್ರೂರತನ ನಾನು ನೋಡಿಯೇ ಇಲ್ಲ ಎಂದು ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜನಸ್ಪಂದನಾ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಬಳಿ ಮೈಕ್ ಕಿತ್ತುಕೊಂಡು ಜಿಟಿಡಿ ಗರಂ!
ಪ್ರಕರಣದ ಬಗ್ಗೆ ಪರ – ವಿರೋಧ ಯಾವ ಚರ್ಚೆ ಬೇಡ. ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಸಂಪುಟ ಸಭೆಯ ಆರಂಭದಲ್ಲೇ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ. ‌ಸಿಎಂ ಸೂಚನೆಗೆ ಕ್ಯಾಬಿನೆಟ್‌ನಲ್ಲಿರುವ ಹೆವಿವೇಟ್ ಸಚಿವರು ತುಟಿಕ್ ಪಿಟಿಕ್ ಮಾತನಾಡದೇ ಸುಮ್ಮನಾದರು ಎಂಬ ವಿಚಾರವನ್ನು ಮೂಲಗಳು ತಿಳಿಸಿವೆ.Sign in to your account
Username or Email Address


Password

 Remember Me


