ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಹಿಂದೆ ದರ್ಶನ್ ಗ್ಯಾಂಗ್ ಏನೆಲ್ಲ ಪ್ಲ್ಯಾನ್ ಮಾಡಿದ್ರು? ಹೇಗೆ ತಗ್ಲಾಕಿಕೊಂಡ್ರು ಎಂಬ ಬಿಗ್ ಎಕ್ಸ್‍ಕ್ಲೂಸೀವ್ ಮಾಹಿತಿಯೊಂದು ನಿಮ್ಮ ಪಬ್ಲಿಕ್ ಟಿವಿಗೆ ದೊರೆತಿದೆ.ಹೌದು. ಕೋರ್ಟ್‍ಗೆ ಸಲ್ಲಿಸಿರುವ ಪೊಲೀಸ್ ರಿಮ್ಯಾಂಡ್ ಕಾಪಿ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸೀವ್ ಆಗಿ ಲಭ್ಯವಾಗಿದೆ. ರೇಣುಕಾಸ್ವಾಮಿ ಸಾವಿಗೆ ಸ್ಫೋಟಕ ಕಾರಣ ಕೊಟ್ಟಿರುವ ವೈದ್ಯರ ವರದಿ, ದರ್ಶನ್ ವಿರುದ್ಧದ ಸಿಸಿಟಿವಿ ಸಾಕ್ಷ್ಯಗಳು, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲ ದರ್ಶನ್ ಹಾಕಿದ್ದ ಬಟ್ಟೆ ವಾಶ್ ಮಾಡಿದ್ದು ಎಲ್ಲಿ..? ಮತ್ತು ಯಾರು..?.. ದರ್ಶನ್ ಹಾಕಿದ್ದ ಶೂಗಳು ಸಿಕ್ಕಿದ್ದು ಎಲ್ಲಿ ಎಂಬ ಅಂಶಗಳು ರಿಮ್ಯಾಂಡ್ ಕಾಪಿಯಲ್ಲಿ ಬಹಿರಂಗವಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ- ಪವನ್ ಮನೆಯಿಂದ ನಾಲ್ಕೂವರೆ ಲಕ್ಷ ಸೀಜ್!ವೈದ್ಯರು ಸ್ಫೋಟಕ ಕಾರಣ ಏನು..?: ರೇಣುಕಾಸ್ವಾಮಿ ಆಘಾತ ಮತ್ತು ಮೆದುಳಿನ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ರೇಣುಕಾಸ್ವಾಮಿ ದೇಹದ 32 ಕಡೆ ಗಾಯದ ಗುರುತುಗಳು ಪತ್ತೆಯಾಗಿವೆ. ತಲೆ ಬುರುಡೆಯಲ್ಲಿ 7ಕ್ಕೂ ಹೆಚ್ಚು ಗಾಯದ ಗುರುತುಗಳಿವೆ. ಮರ್ಮಾಂಗದಲ್ಲಿ ತೀವ್ರ ರಕ್ತಸ್ರಾವವಾಗಿರುವ ಭಯಾನಕ ಅಂಶ ಪೋಸ್ಟ್ ಮಾರ್ಟಂ ರಿಪೋರ್ಟ್‍ನಲ್ಲಿ ಬಹಿರಂಗವಾಗಿದೆ.ದರ್ಶನ್ ವಿರುದ್ಧ ಸಿಸಿಟಿವಿ ಸಾಕ್ಷ್ಯ: ಇನ್ನು ಪಟ್ಟಣಗೆರೆ ಶೆಡ್‍ನಲ್ಲಿ ಮಹತ್ವದ ಸಾಕ್ಷಿ ಲಭ್ಯವಾಗಿದೆ. ಕೃತ್ಯಕ್ಕೆ ಬಳಸಿದ್ದ ಲಾಠಿ, ರಿಪೀಸ್ ಪಟ್ಟಿ ಮುಂತಾದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಕ್ತದ ಕಲೆಗಳು ಹಾಗೂ ಭೌತಿಕ ಕುರುಹುಗಳು ಕೂಡ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ವಶಕ್ಕೆ ಪಡೆಯಲಾಗಿದ್ದು, 30 ನಿಮಿಷದ ಸಿಸಿಟಿವಿ ದೃಶ್ಯ ಕೇಸ್‍ನಲ್ಲಿ ಪ್ರಮುಖ ಸಾಕ್ಷ್ಯವಾಗೋ ಸಾಧ್ಯತೆಗಳಿವೆ.Sign in to your account
Username or Email Address


Password

 Remember Me


