ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎಸ್‌ಪಿಪಿ (SPP) ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಬದಲಾವಣೆ ಮಾಡೋದಾದ್ರೆ ಸರ್ಕಾರ ಮತ್ತು ಅಡ್ವೊಕೇಟ್ ಜನರಲ್, ಕಾನೂನು ತಜ್ಞರ ಸಲಹೆ ಪಡೆದು ಮುಂದುವರೆಯುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ.ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎಸ್‌ಪಿಪಿ ಬದಲಾವಣೆಗೆ ಒತ್ತಡ ಬರುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಯಾರೇ ಎಸ್‌ಪಿಪಿ ಆಗಿ ನೇಮಕಗೊಂಡರೂ ಸ್ಟ್ರಿಕ್ಟ್ ಆಗಿಯೇ ಇರಬೇಕು. ಕಾನೂನು ಪ್ರಕಾರವೇ ಕೆಲಸ ಮಾಡಬೇಕು. ಯಾರನ್ನೇ ನೇಮಕ ಮಾಡಿದರೂ ಎಲ್ಲರಿಗೂ ಒಂದೇ ಕಾನೂನು ಎಂದರು. ಇದನ್ನೂ ಓದಿ:‌ ಕೆಂಡದಂತ ಬಿಸಿಲು, ಬಿಸಿಗಾಳಿ ಹೊಡೆತಕ್ಕೆ ದೆಹಲಿಯಲ್ಲಿ 15 ಮಂದಿ ಸಾವುಈ ಪ್ರಕರಣದಲ್ಲಿ ಎಸ್‌ಪಿಪಿ ಬದಲಾವಣೆ ಆಗುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಒಂದು ವೇಳೆ ಎಸ್‌ಪಿಪಿ ಬದಲಾವಣೆ ಮಾಡಿದರೂ ಕೂಡಾ ಅದರಲ್ಲಿ ತಪ್ಪೇನಿಲ್ಲ. ಆ ರೀತಿ ತೀರ್ಮಾನ ತೆಗೆದುಕೊಂಡರೆ ಏನಾದರೂ ಕಾರಣ ಇದ್ದೇ ಇರುತ್ತದೆ. ಆದರೆ ಈ ಕೇಸ್ ಸಡಿಲ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಯಾವ ಮುಲಾಜೂ, ಒತ್ತಡ ಇಲ್ಲದೇ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.  ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ: ಪರಮೇಶ್ವರ್‌


 Advertisement 







 Advertisement 




Sign in to your account
Username or Email Address


Password

 Remember Me


