– ಪೋಷಕರಲ್ಲಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಬೆಂಗಳೂರು: ಬರ್ತ್‌ಡೇ ಪಾರ್ಟಿ (Birthday Party) ಇದೆ ಎಂದು ಆಸೆ ತೋರಿಸಿ ಬಾಲಕನೊಬ್ಬನನ್ನು ಕಿಡ್ನಾಪ್ (Boy Kidnap) ಮಾಡಿದ ಘಟನೆ ಎಲೆಕ್ಟ್ರಾನಿಕ್ ಸಿಟಿ (Electronic City) ಸಮೀಪದ ದೊಡ್ಡತೋಗೂರು ಬಳಿ ನಡೆದಿದೆ.ಸೋಮವಾರ ಸಂಜೆ 6 ಸುಮಾರಿಗೆ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಮಾರ್ವಾಡಿ ದಂಪತಿಯ 9 ವರ್ಷದ ಮಗನನ್ನು ಆರೋಪಿ ಮೊಹಮದ್ ಜಶಿಮುದ್ದೀನ್ ಶೇಕ್ (24) ಕಿಡ್ನಾಪ್ ಮಾಡಿದ್ದ. ಮನೆ ಬಳಿಯಿದ್ದ ಬಾಲಕನಿಗೆ ಕೇಕ್ (Cake) ಕೊಡಿಸುವುದಾಗಿ ಆಸೆ ತೋರಿಸಿ ಕಿಡ್ನಾಪ್ ಮಾಡಿ 14 ಕಿ.ಮೀ ಸುತ್ತಾಡಿದ್ದಾನೆ. ಪೊಲೀಸರ ದಾರಿ ತಪ್ಪಿಸಲು ಹಲವು ಕಡೆ ಆಟೋದಲ್ಲಿ ಸುತ್ತಾಟ ನಡೆಸಿದ್ದಲ್ಲದೇ ಬಳಿಕ ಪೋಷಕರಿಗೆ ಕರೆ ಮಾಡಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಇದನ್ನೂ ಓದಿ: ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ: ಡಿಕೆಶಿವೀರಸಂದ್ರ, ಹುಸ್ಕೂರು ಸುತ್ತಮುತ್ತ ಬಾಲಕನ ಜೊತೆ ಆರೋಪಿ ಓಡಾಟ ನಡೆಸಿದ್ದು, ಪದೇ ಪದೇ ಲೊಕೇಶನ್ ಬದಲಿಸುತ್ತಿದ್ದ. ಕೊನೆಗೆ ಇಂದು ಬೆಳಗ್ಗೆ ಬಾಲಕ ಸಹಿತ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊನೆಗೂ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದ್ದು, ಬಾಲಕ ಪೋಷಕರ ಮಡಿಲು ಸೇರಿದ್ದಾನೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ 13 ಗಂಟೆಗಳಲ್ಲಿ ಬಾಲಕನನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಹಂತಕ ಬಾಲಕನಿಗೆ ಏನು ಮಾಡುತ್ತಾನೋ ಎನ್ನುವ ಆತಂಕದಿಂದ ಸೋಮವಾರ ಇಡೀ ರಾತ್ರಿ ನಿದ್ದೆ ಮಾಡದೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮೊಬೈಲ್ ಲೊಕೇಶನ್ ಸೇರಿ ಹಲವು ದಾಖಲೆಗಳನ್ನು ಇನ್ಸ್‌ಪೆಕ್ಟರ್ ರಾತ್ರಿಯೇ ಕಲೆ ಹಾಕಿದ್ದರು. ಇನ್ಸ್ಪೆಕ್ಟರ್ ನವೀನ್, ಪಿಎಸ್‌ಐ ಸಿದ್ದಪ್ಪ ಸೇರಿ ಹಲವು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.‌ ಇದನ್ನೂ ಓದಿ: ಭ್ರಷ್ಟಾಚಾರ, ಕಮಿಷನ್ ದಂಧೆ ನಿಲ್ಲಿಸಿದ್ರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತೆ: ಎಎಪಿ






 Advertisement 




Sign in to your account
Username or Email Address


Password

 Remember Me


