ಬೆಳಗಾವಿ: ಹೆತ್ತ ಮಕ್ಕಳನ್ನು ಬಿಟ್ಟು 40 ವರ್ಷದ ವ್ಯಕ್ತಿಯ ಜೊತೆಗೆ ತಾಯಿ (Mother) ಓಡಿ ಹೋಗಿರುವ ವಿಚಿತ್ರ ಘಟನೆ ಬೆಳಗಾವಿಯ (Belagavi) ಗಣೇಶಪುರದಲ್ಲಿ ನಡೆದಿದ್ದು, ತಾಯಿಗಾಗಿ ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ (Police) ಮೊರೆ ಹೋಗಿದ್ದಾರೆ.ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ವ್ಯಕ್ತಿಯ ಜೊತೆಗೆ ಕಳೆದ ಕೆಲ ತಿಂಗಳಿನಿಂದ ಆ ಮಹಿಳೆ ಜೀವನ ನಡೆಸುತ್ತಿದ್ದಾಳೆ. ಸರ್ಕಾರಿ ನೌಕರಿಯಲ್ಲಿದ್ದ ಪತಿಯ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಳು. ತಂದೆ ತೀರಿ ಹೋದ ಬಳಿಕ ತಾಯಿ ಆಶ್ರಯದಲ್ಲಿದ್ದ ಮಕ್ಕಳೀಗ ಬೀದಿಗೆ ಬಂದಿದ್ದಾರೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು – ಮೈಸೂರು, ಹಾಸನ ಜಿಲ್ಲೆಗೆ ಪ್ರವೇಶಿಸದಂತೆ ಷರತ್ತು ತಾಯಿ ಬಿಟ್ಟು ಹೋಗಿದ್ದರಿಂದ ಆತಂಕಿತರಾಗಿರುವ ಮಕ್ಕಳು, ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವೇಳೆ ತಾಯಿ ಬೇರೊಬ್ಬನ ಜೊತೆಗೆ ನೆಲೆಸಿದ್ದಾಳೆ ಎಂಬ ವಿಚಾರ ಗೊತ್ತಾಗಿದೆ. ಆತನ ಬಿಟ್ಟು ತಮ್ಮ ಜೊತೆಗೆ ಬರುವಂತೆ ಹಲವು ಬಾರಿ ಮಕ್ಕಳು ಮನವಿ ಮಾಡಿಕೊಂಡರೂ ನಿಮ್ಮೊಟ್ಟಿಗೆ ನಾನು ಬರುವುದಿಲ್ಲ ಎಂದು 40 ವರ್ಷದ ತಾಯಿ ಹಠ ಹಿಡಿದು ಕುಳಿತಿದ್ದಾಳೆ.ತಾಯಿಯನ್ನು ತಮ್ಮೊಟ್ಟಿಗೆ ಕಳುಹಿಸುವಂತೆ ಪೊಲೀಸರಿಗೆ ಮಕ್ಕಳು ಮನವಿ ಮಾಡಿಕೊಂಡರೆ, ಮಕ್ಕಳೊಟ್ಟಿಗೆ ಹೋಗಲ್ಲ ಅಂತಾ ತಾಯಿ ಪಟ್ಟು ಹಿಡಿದಿದ್ದಾಳೆ. ಹಾಗಾಗಿ ಅಡಕತ್ತರಿ ಕ್ಯಾಂಪ್ ಠಾಣೆ ಪೊಲೀಸರು‌ ಸಿಲುಕುವಂತಾಗಿದೆ. 
ಬಾಡಿಗೆ ಕಟ್ಟದ್ದಕ್ಕೆ ಮನೆ ಮಾಲೀಕರು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ತಾಯಿ ಬಂದರೆ ನಾವೇ ಶಾಲೆ, ಕಾಲೇಜು ಬಿಟ್ಟು ಕೆಲಸಕ್ಕೆ ಹೋಗಿ ಸಾಕುತ್ತೇವೆ ಎಂದು ಮಕ್ಕಳು ಕೇಳಿಕೊಳ್ಳುತ್ತಿದ್ದಾರೆ.ಇನ್ನು ಈ ಕುರಿತು ತಾಯಿಯನ್ನು ಮಾಧ್ಯಮಗಳು ಕೇಳಿದಕ್ಕೆ, ಇದು ನಮ್ಮ ವೈಯಕ್ತಿಕ ವಿಚಾರ. ಇದನ್ನು ಕೇಳಲು ನೀವ್ಯಾರು ಎಂದು ರೋಷಾವೇಷ ತೋರಿದ್ದಾಳೆ.Sign in to your account
Username or Email Address


Password

 Remember Me


