ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ (Petrol) ಹಾಗೂ ಡೀಸೆಲ್‌ (Diesel) ದರ ಏರಿಕೆಗೊಳಿಸಿ ವಾಹನ ಸವಾರರಿಗೆ ಶಾಕ್ ನೀಡಿದೆ.ಪೆಟ್ರೋಲ್, ಡಿಸೇಲ್ ಮೇಲಿನ ಟ್ಯಾಕ್ಸ್ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಿಟೇಲ್‌ ಸೇಲ್ಸ್‌ ಟ್ಯಾಕ್ಸ್‌ ದರ ಹೆಚ್ಚಳ ಮಾಡಲಾಗಿದೆ. ಇದನ್ನೂ ಓದಿ: `ಡಿ’ಬಾಸ್ ಬಗ್ಗೆ ಮಾತಾಡಿದ್ರೆ ಜೀವಂತ ಸುಡೋದಾಗಿ ಬೆದರಿಕೆ – ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ವಶಕ್ಕೆಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದದ್ದು, ಈಗ 29.84% ಗೆ ಏರಿಕೆ (3.9% ಹೆಚ್ಚಳ)ಯಾಗಿದೆ. ಅಂತೆಯೇ ಡಿಸೇಲ್ ಈ‌ ಹಿಂದೆ- 14.34% ಇದ್ದದ್ದು, ಈಗ 18.44%ಗೆ ಏರಿಕೆ ಕಂಡಿದೆ (4.1% ರಷ್ಟು ಏರಿಕೆ). ಇದನ್ನೂ ಓದಿ: ದರ್ಶನ್‌ ಗ್ಯಾಂಗ್‌ನಿಂದ ಹತ್ಯೆ ಕೇಸ್;‌ ಸರ್ಕಾರದ ಎಸ್‌ಪಿಪಿಯಾಗಿ ಪ್ರಸನ್ನಕುಮಾರ್‌ ನೇಮಕಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ಪೆಟ್ರೋಲ್‌ ದರ 100 ರೂಪಾಯಿ ದಾಟಲಿದೆ. ಈಗ ಪೆಟ್ರೋಲ್‌ ದರ 99.54 ರೂ. ಇದ್ದು, ಮುಂದೆ 102 ರೂಪಾಯಿಗೆ ಏರಿಕೆಯಾಗಲಿದೆ. ಇವತ್ತಿನ ಡೀಸೆಲ್‌ ದರ 85.93 ರೂಪಾಯಿ ಇದೆ. ಅದು 89.43 ರೂ. ಏರಿಕೆಯಾಗಲಿದೆ.Sign in to your account
Username or Email Address


Password

 Remember Me


