ಚಿತ್ರದುರ್ಗ: ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅವರ ನಿವಾಸಕ್ಕಿಂದು ಫಿಲ್ಮ್ ಚೆಂಬರ್ (Karnataka Film Chamber) ತಂಡ ಭೇಟಿ ನೀಡಿತ್ತು. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಧೈರ್ಯತುಂಬಿ, ವಾಣಿಜ್ಯ ಮಂಡಳಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಯಿತು. ಮುಂದೆ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡಬೇಕು ಅನ್ನೋದನ್ನ ನೋಡಿಕೊಂಡು ಶಾಶ್ವತ ಪರಿಹಾರ ಕೊಡಿಸುವ ಭರವಸೆಯನ್ನೂ ಚೇಂಬರ್‌ ಅಧ್ಯಕ್ಷರು ನೀಡಿದರು.ಬಳಿಕ ಫಿಲ್ಮ್ ಚೇಂಬರ್‌ನಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು (Sa Ra Govindu), ತಪ್ಪು ಮಾಡುವುದು ಮನುಷ್ಯನ ಸಹಜ ಗುಣ ಆದ್ರೆ ಈ ರೀತಿ ಮಾಡಬಾರದಿತ್ತು. ಇದಕ್ಕೆ ಚಿತ್ರರಂಗ ಹೊಣೆ ಅಲ್ಲ ಅವರೊಬ್ಬರಿಂದ ನಾವೆಲ್ಲ ತಲೆ ತಗ್ಗಿಸುವ ಕೆಲಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ: 
ಜನರು ಸಿನಿಮಾ ಅಂದ್ರೆ ಅದಕ್ಕೆ ಕೂಡುವ ಗೌರವವೇ ಬೇರೆ ಇತ್ತು. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಅವರ ಹೆಸರಿಗೂ ಅಷ್ಟೇ ಗೌರವ ಕೊಡುತ್ತಿದ್ದರು. ಆದ್ರೆ ಇತ್ತೀಚೆಗೆ ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡಿಸುತ್ತಿದೆ ಎಂದು ಶ್ಲಾಘಿಸಿದರು. ನಾವು ಯಾರ ಪರವಾಗಿಯೂ ಬಂದಿಲ್ಲ. ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಂದಿದ್ದೇವೆ. ಆ ತಾಯಿಯನ್ನ ನೋಡಿದ್ರೆ ಹೊಟ್ಟೆ ಉರಿಯುತ್ತೆ. ಆ ತಾಯಿ ಕೇಳಿಕೊಳ್ಳುತ್ತಿರೋದು ಒಂದೇ ತಪ್ಪು ಮಾಡಿವರಿಗೆ ಶಿಕ್ಷೆ ನೀಡಬೇಕು ಅಂತ. ಖಂಡಿತ ಅದು ಆಗುತ್ತದೆ ಎಂದರು.ಫಿಲ್ಮ್ ಚೆಂಬರ್ ಅಧ್ಯಕ್ಷ ಎನ್.ಎಂ ಸುರೇಶ್ (NM Suresh) ಮಾತನಾಡಿ, ಯಾರೇ ಮಾಡಿದ್ರೂ ತಪ್ಪು ತಪ್ಪೆ. ವಾಣಿಜ್ಯ ಮಂಡಳಿ ಇಂತಹ ತಪ್ಪುಗಳನ್ನು ಖಂಡಿಸಿದೆ. ಮೃತನ ತಂದೆ-ತಾಯಿ ಕಣ್ಣಿರು ನೋಡಿ ನಮಗೂ ಕಣ್ಣಿರು ಬಂತು ಎಂದು ಭಾವುಕರಾದರು.ಇದೇ ವೇಳೆ ದರ್ಶನ್ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಿರ್ಧಾರ ನಾವು ಮಾಡೊಕೆ ಆಗಲ್ಲ. ಕಲಾವಿದರ ಸಂಘ ನಿರ್ಮಾಪಕರ ಸಂಘ ಕೂಡ ಇದೆ. ಅಲ್ಲಿ ಸಭೆ ಮಾಡಿದ ನಂತರ ನಿರ್ಧಾರ ಮಾಡುತ್ತೆ. ಈ ಹಿಂದೆಯೂ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅಂಬರೀಶ್‌ ಅವರಿಗೂ ಫ್ಯಾನ್ಸ್ ಇದ್ದರು. ಆದ್ರೆ ಇತ್ತೀಚಿನ ಫ್ಯಾನ್ಸ್ ಪ್ರಚೋದನೆ ಒಳಗಾಗುತ್ತಿದ್ದಾರೆ. ಪ್ರಚೋದನೆಗೆ ಒಳಗಾಗಿಗೇ ಈ ರೀತಿ ಘಟನೆ ನಡೆದಿದೆ. ಅಭಿಮಾನಿಗಳು ಸಹ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.Sign in to your account
Username or Email Address


Password

 Remember Me


