ಕೊಪ್ಪಳ: ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ್‌ ಹಿಟ್ನಾಳ್‌ (Rajashekar Hitnal) ಅವರು ಬಿಜೆಪಿ ಡಾ. ಬಸವರಾಜ್‌ ಕ್ಯಾವಟೂರ್‌ (Basavaraj S Kyavater) ಅವರನ್ನು 46,357 ಮತಗಳಿಂದ ಸೋಲಿಸಿದ್ದಾರೆ.ಕೊನೆಯವರೆಗೂ ರೋಚಕತೆಯಿಂದ ಕೂಡಿದ ಸ್ಪರ್ಧೆಯಲ್ಲಿ ರಾಜಶೇಖರ ಹಿಟ್ನಾಳ್‌ ಅವರು 6,63,511 ಮತಗಳನ್ನು ಪಡೆದರೆ ಬಸವರಾಜ್‌ ಕ್ಯಾವಟೂರ್‌ ಅವರು 6,17,154 ಮತಗಳನ್ನು ಪಡೆದರು.
ಕಳೆದ ಚುನಾವಣೆಯಲ್ಲಿ ಕರಣಿ ಸಂಗಣ್ಣ (Karadi Sanganna) ಈ ಕ್ಷೇತ್ರದಿಂದ ಜಯಗಳಿಸಿದ್ದರು. ಈ ಬಾರಿಯೂ ಕರಡಿ ಸಂಗಣ್ಣ ಟಿಕೆಟ್‌ ಬಯಸಿದ್ದರು. ಆದರೆ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದಕ್ಕೆ ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.2019ರ ಚುನಾವಣೆಯಲ್ಲಿ ಕರಡಿ ಸಂಗಣ್ಣ 38 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. Sign in to your account
Username or Email Address


Password

 Remember Me


