ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳನ್ನು (Exit Poll) ಮೀರಿ ಬಿಜೆಪಿ (BJP) ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಿಶ್ವಾಸ ವ್ಯಕ್ತಪಡಿಸಿದರು.ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ. ಬಿಜೆಪಿ ಯಾವತ್ತಿಗೂ ಇದನ್ನ ಹೇಳುತ್ತಲೇ ಬಂದಿದೆ. ಆದರೆ, ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದರು. ಈಗ ಚುನಾವಣಾ ಸಮೀಕ್ಷೆಗಳೇ NDA ಐತಿಹಾಸಿಕ ಗೆಲುವನ್ನು ಖಚಿತಪಡಿಸಿವೆ ಎಂದು ಜೋಶಿ ಸ್ಪಷ್ಟಪಡಿಸಿದರು.ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದಲ್ಲಿ NDA ಪ್ರಚಂಡ ಬಹುಮತದಿಂದ ಗೆಲ್ಲಲಿದೆ. ಕರ್ನಾಟಕದಲ್ಲೂ 25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದ ಅವರು, ಜನರ ದಿಕ್ಕು ತಪ್ಪಿಸುವಲ್ಲಿ, ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ವಾಸ್ತವವನ್ನೇ ಮರೆ ಮಾಚುತ್ತಾರೆ ಎಂದು ಆರೋಪಿಸಿದರು.ಸಚಿವ ನಾಗೇಂದ್ರ ಬಂಧನವಾದ್ರೆ ಎಲ್ಲಾ ಬಯಲಿಗೆ: 
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಬಂಧನವಾದರೆ ಎಲ್ಲವೂ ಬಯಲಾಗಲಿದೆ. ಸಚಿವರನ್ನ ಬಂಧಿಸಿದಲ್ಲಿ ಈ ಭ್ರಷ್ಟಾಚಾರ ಹಗರಣದಲ್ಲಿ ಸಿಎಂ ಸೇರಿದಂತೆ ಮತ್ಯಾರು, ಭಾಗಿಯಾಗಿದ್ದಾರೆ? ಅವರ ಪಾತ್ರ ಏನಿದೆ? ಎಂಬುದು ಗೊತ್ತಾಗಲಿದೆ. ಹಾಗಾಗಿ ರಾಜ್ಯ ಸರ್ಕಾರ ಮೊದಲು ಸಚಿವ ನಾಗೇಂದ್ರರನ್ನ ಬಂಧಿಸಲಿ ಎಂದು ಒತ್ತಾಯಿಸಿದರು.Sign in to your account
Username or Email Address


Password

 Remember Me


