ಚಿಕ್ಕಬಳ್ಳಾಪುರ: ಈಜಲು (Swimming) ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮಂಚೇನಹಳ್ಳಿ (Manchenahalli) ಬಳಿ ಇರುವ ದಂಡಿಗಾನಹಳ್ಳಿ ಡ್ಯಾಮ್‌ನಲ್ಲಿ ನಡೆದಿದೆ.ಮಹಾರಾಷ್ಟ್ರದ (Maharashtra) ಮುಂಬೈ (Mumbai) ಮೂಲದ ಆಲಿಯಾ ಪಾಟೀಲ್ (17) ಹಾಗೂ ಜೋಯ ಪಾಟೀಲ್(14) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬೇಸಿಗೆಯ ರಜೆ ಹಿನ್ನೆಲೆಯಲ್ಲಿ ಮುಂಬೈ ಮೂಲದ ಬಾಲಕಿಯರು ಗೌರಿಬಿದನೂರು ನಗರದ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಇನ್ನೆರಡು ದಿನಗಳ ನಂತರ ಮುಂಬೈಗೆ ವಾಪಸ್ ಆಗಲಿದ್ದರು. ದಂಡಿಗಾನಹಳ್ಳಿ ಜಲಾಶಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಜಲಾಶಯಕ್ಕೆ ಹೋದವರು ಜಲಾಶಯದ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಪೊಲೀಸ್ ಅಧಿಕಾರಿ ನಿವೃತ್ತಿ ಹಿಂದಿನ ದಿನವೇ ಸಸ್ಪೆಂಡ್ಸ್ಥಳೀಯರು ಇಬ್ಬರ ಮೃತದೇಹವನ್ನು ನೀರಿನಿಂದ ಮೇಲೆ ತಂದಿದ್ದಾರೆ. ಮೃತರ ಸಂಬಂಧಿಕರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸದೆ ಮನೆಗೆ ತೆಗೆದುಕೊಂಡು ಹೋಗಿದ್ದರು. ಕೊನೆಗೆ ಪೊಲೀಸರು ಮನೆಗೆ ತೆರಳಿ ಸಂಬಂಧಿಕರ ಮನವೊಲಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೆರಡು ದಿನಗಳಲ್ಲಿ ಜೀವಂತವಾಗಿ ಮುಂಬೈಗೆ ತೆರಳಬೇಕಿದ್ದ ಇಬ್ಬರು ಬಾಲಕಿಯರು ಸದ್ಯ ಶವವಾಗಿ ಮುಂಬೈಗೆ ತೆರಳಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಮೈತ್ರಿಯಿಂದ 10 ಸ್ಥಾನ ಗೆಲುವು: ಬಿಜೆಪಿ ವಿಶ್ವಾಸ


 Advertisement 







 Advertisement 




Sign in to your account
Username or Email Address


Password

 Remember Me


