ಬೆಂಗಳೂರು: ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅವಕಾಶ ಮಾಡಿಕೊಡುವ ಬಗ್ಗೆ ಎರಡು, ಮೂರು ದಿನದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.ಇಂದು ಚಲನಚಿತ್ರ ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು ಹಾಗೂ ಶ್ರೀಕಾಂತ್ ಅವರು ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅನುಮತಿ ಕೋರುವ ಸಂಬಂಧ ವಿಧಾನಸೌಧದ ಕೊಠಡಿ 339ರಲ್ಲಿ ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅನೇಕ ಚಟುವಟಿಕೆಗೆ ರಿಯಾಯಿತಿ ನೀಡಿದ್ದೇವೆ. ಸಿನಿಮಾಗೆ ಶೇ.50 ರಷ್ಟು ರಿಯಾಯಿತಿ ನೀಡಿದ್ದೇವೆ. ಈಗ ಶೇ.100 ರಷ್ಟು ಬೇಡಿಕೆ ಇಟ್ಟಿದ್ದಾರೆ. ಇವರಿಗೆ ಹೇಗೆ ಸಹಕಾರ ಕೊಡಬೇಕು ಎಂಬುದರ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಈ ಕುರಿತು 2, 3 ದಿನದಲ್ಲಿ ತಾಂತ್ರಿಕ ಸಲಹೆ ಸಮಿತಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:  ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜುನಿರ್ಮಾಪಕ ಸೂರಪ್ಪ ಬಾಬು ಈ ಕುರಿತು ಮಾತನಾಡಿದ್ದು, ಆದಷ್ಟು ಬೇಗ ಈ ವಿಚಾರಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ಇತರೆ ಕೊರೊನಾ ನಿಯಮ ಸಡಿಲಿಕೆ ಬಗ್ಗೆಯು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. Sign in to your account
Username or Email Address


Password

 Remember Me


