ಚಿಕ್ಕೋಡಿ: ನಾಗರಹಾವು ರಸ್ತೆಗೆ ಬಂದು ಅರ್ಧ ಗಂಟೆಗಳ ಕಾಲ ಸಂಚಾರ ಬಂದ್ ಮಾಡಿರಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಸಂಭವಿಸಿದೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಈ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಇಂದು ಸಂಜೆ ನಾಗರಹಾವು ಕಾಣಿಸಿಕೊಂಡು, ರೋಡಿನ ಮೇಲೆ ಹೆಡೆ ಎತ್ತಿ ಕೆಲಕಾಲ ಆಟ ಆಡಿದೆ. ಇದನ್ನೂ ಓದಿ: ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟಅರ್ಧ ಗಂಟೆಗಳ ಕಾಲ ರೋಡಿನ ಮೇಲೆ ಆಟ ಆಡಿದ ನಂತರ ಪಕ್ಕದ ಹುಲ್ಲು ಗಾಡಿಗೆ ಸೇರಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತು. ವಾಹನ ಸವಾರರು ಮಾತ್ರ ಹಾವು ನೋಡುತ್ತ ಮೂಕ ಪ್ರೇಕ್ಷಕರಂತೆ ನಿಂತಿದ್ದರು.Sign in to your account
Username or Email Address


Password

 Remember Me


