ಕಲಬುರಗಿ: ಯಾದಗಿರಿ ತಾಲೂಕಿನ ಹೆಡಗಿಮದ್ರ ಗ್ರಾಮದ ಗುಡ್ಡಗಾಡು ಪ್ರದೇಶದಿಂದ ಪಾಕಿಸ್ತಾನಕ್ಕೆ ನಿಷೇಧಿತ ಸ್ಯಾಟಲೈಟ್ ಪೋನ್ ಕರೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಈಗಾಗಲೇ ಕಳೆದ ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಕರೆ ಹೋಗಿರುವ ಶಂಕೆ ಹಿನ್ನೆಲೆಯಲ್ಲಿ ಕಲಬುರಗಿಯಿಂದ ಐಎಸ್‍ಡಿ ತಂಡ ಬಂದು ತನಿಖೆ ನಡೆಸಿದೆ.ಕರೆ ಹೋಗಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆ ಗ್ರಾಮಕ್ಕೆ ಭೇಟಿ ನೀಡಿದ ಕಲಬುರಗಿ ಐಎಸ್‍ಡಿ ಇನ್ಸ್‌ಪೆಕ್ಟರ್‌ ಮಹಾದೇವಪ್ಪ ಪಂಚಮುಖಿ ನೇತೃತ್ವದ ತಂಡ ಮಾಹಿತಿ ಕಲೆ ಹಾಕಿದೆ. ಮಾಹಿತಿ ಕಲೆ ಹಾಕಿದ ತಂಡ ಎಡಿಜಿಪಿ ಅವರಿಗೆ ವರದಿ ಒಪ್ಪಿಸಿದೆ. ಇದನ್ನೂ ಓದಿ: ತುಮಕೂರು ಲಾಡ್ಜ್‌ನಲ್ಲಿ ಸುರಂಗ- ಸುರಂಗದೊಳಗೆ ವೇಶ್ಯಾವಾಟಿಕೆ ಯಾದಗಿರಿ ಬಳಿಯಿಂದ ಸ್ಯಾಟ್‍ಲೈಟ್ ಪೋನ್ ಮೂಲಕ ಪಾಕಿಸ್ತಾನಕ್ಕೆ ಕರೆ ಮಾಡಿರುವ ಖಚಿತ ಮಾಹಿತಿ ಪೊಲೀಸ್ ಗುಪ್ತದಳಕ್ಕೆ ಸಿಕ್ಕಿದೆ. ಆದರೆ ಕರೆ ಮಾಡಿದವರು ಯಾರು ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವ ಸುಳಿವು ಸಹ ಸಿಕ್ಕಿಲ್ಲ, ಇದೀಗ ಗುಪ್ತಚರ ಪೊಲೀಸರು ಮತ್ತು ಆಂತರಿಕ ಭದ್ರತೆ ಪೊಲೀಸರು ಕರೆ ಮಾಡಿದ ವ್ಯಕ್ತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


