ಬೆಂಗಳೂರು: ಒಂದೆಡೆ 2023ರ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಗೇಮ್ ಪ್ಲಾನ್ ಶುರು ಮಾಡಿಕೊಂಡಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.ಹೌದು. ಕಾಂಗ್ರೆಸ್ ಆಪರೇಷನ್ ಬಗ್ಗೆ ಬಿಎಸ್‍ವೈ ಗರಂ ಆಗಿದ್ದಾರೆ. ವಿಪಕ್ಷಗಳನ್ನು ಹಗುರವಾಗಿ ಕಾಣ್ಬೇಡಿ ಅಂತ ತಮ್ಮ ಪಕ್ಷದ ನಾಯಕರನ್ನು ಎಚ್ಚರಿಸಿದ್ದಾರೆ. ಯಡಿಯೂರಪ್ಪ ಎಚ್ಚರಿಕೆ ಹಿಂದಿನ ಸೀಕ್ರೆಟ್ ಏನು,..? ತಾವಿಲ್ಲದ ಬಿಜೆಪಿ ಹೇಗಿರುತ್ತೆ ಅನ್ನೋ ಟ್ರೇಲರ್ ತೋರಿಸಿದ್ರಾ ಮಾಜಿ ಸಿಎಂ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?ಸದ್ದಿಲ್ಲದೇ ಆಪರೇಷನ್ ಹಸ್ತ ಜಾರಿಯಲ್ಲಿದೆ. ಜೆಡಿಎಸ್, ಬಿಜೆಪಿ ಶಾಸಕರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಕೈ ತಂತ್ರಗಾರಿಕೆ ಹೂಡಿದೆ. ಆಪರೇಷನ್ ಕಾಂಗ್ರೆಸ್ ಬೆನ್ನಲ್ಲೇ ಯಡಿಯೂರಪ್ಪ ಅಲರ್ಟ್ ಆಗಿದ್ದಾರೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿ ಶಾಸಕರನ್ನು ಸೆಳೆಯುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ಕಡೆಗಣಿಸಿದರೆ ಬಿಜೆಪಿಗೆ ದೊಡ್ಡ ನಷ್ಟ. ತಮ್ಮ ವಿಚಾರದಲ್ಲಿ ಹೈಕಮಾಂಡ್‍ನ ನಡೆ, ಧೋರಣೆಗಳು ಸಕಾಲಿಕ ಅಲ್ಲ ಎಂದು ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.Sign in to your account
Username or Email Address


Password

 Remember Me


