ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಅಲ್ಪಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇಂದು 783 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 16 ಮಂದಿ ಸಾವನ್ನಪ್ಪಿದ್ದು, 1,139 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ರಾಜ್ಯದಲ್ಲಿ ಒಟ್ಟು 15,383 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,67,866 ಮಂದಿಗೆ ಕೊರೊನಾ ಬಂದಿದೆ. 29,14,852 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.60ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.2.04ರಷ್ಟಿದೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂಇಂದು ರಾಜ್ಯದಲ್ಲಿ ಒಟ್ಟು 58,509 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,29,874 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,01,497 + 28,377 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 267 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 7 ಜನ ಮರಣ ಹೊಂದಿದ್ದಾರೆ. 277 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಇದನ್ನೂ ಓದಿ: ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಳ್ಳಾರಿ 3, ಬೆಳಗಾವಿ 15, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 267, ಬೀದರ್ 1, ಚಾಮರಾಜನಗರ 4, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 36, ಚಿತ್ರದುರ್ಗ 13, ದಕ್ಷಿಣ ಕನ್ನಡ 97, ದಾವಣಗೆರೆ 6, ಧಾರವಾಡ 2, ಹಾಸನ 34, ಹಾವೇರಿ 1, ಕಲಬುರಗಿ 3, ಕೊಡಗು 41, ಕೋಲಾರ 2, ಮಂಡ್ಯ 13, ಮೈಸೂರು 69, ಶಿವಮೊಗ್ಗ 28, ತುಮಕೂರು 23, ಉಡುಪಿ 82, ಉತ್ತರ ಕನ್ನಡ 29, ಮತ್ತು ವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.






 Advertisement 




Sign in to your account
Username or Email Address


Password

 Remember Me


