ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಚೆಕ್  ಪೋಸ್ಟ್‌ಗೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಕ್ತಿನಗರ ಬಳಿ ನಡೆದಿದೆ.ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚೆಕ್ ಪೋಸ್ಟ್ ನಾಶವಾಗಿದೆ. ಚಾಲಕನ ಸಹಾಯಕನಿಗೆ ಗಂಭೀರ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಟೈಯರ್ ಬ್ಲಾಸ್ಟ್ ಆಗಿರುವುದರಿಂದ ಚಾಲಕನಿಗೆ ಲಾರಿಯ ನಿಯಂತ್ರಣ ತಪ್ಪಿ, ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮದ್ಯ ಸೇವಿಸಿ ಯದ್ವಾತದ್ವಾ ಲಾರಿ ಓಡಿಸಿದ ಚಾಲಕ- ಸಾರ್ವಜನಿಕರಿಂದ ಆಕ್ರೋಶಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ದೇಹ ಎರಡು ತುಂಡಾಗಿದ್ದು, ಇಡೀ ಚೆಕ್ ಪೋಸ್ಟ್ ಸಂಪೂರ್ಣ ನಾಶವಾಗಿದೆ. ಚಾಲಕನ ಮೃತದೇಹವನ್ನು ರಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇದನ್ನೂ ಓದಿ: ಲಸಿಕೆ ಪ್ರಮಾಣ ಹೆಚ್ಚಳ – ಯಾದಗಿರಿ ಜಿಲ್ಲಾಡಳಿತದ ಪ್ಲ್ಯಾನ್ ಯಶಸ್ವಿಯಾಗಿದ್ದು ಹೇಗೆ? Sign in to your account
Username or Email Address


Password

 Remember Me


