ತುಮಕೂರು: ಮಾರ್ಗ ಮಧ್ಯೆದ ಹೋಟೆಲ್‍ನಲ್ಲಿ ಟೀ ಕುಡಿದ ಸಿಎಂ ಬಸವರಾಜ್ ಬೊಮ್ಮಾಯಿ ಜಿಲ್ಲೆಯಲ್ಲಿ ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆಯನ್ನು ವಿಚಾರಿಸಿದ್ದಾರೆ.ದಾವಣಗೆರೆಗೆ ಹೋಗುವ ಮಧ್ಯೆ ತುಮಕೂರು ಜಿಲ್ಲೆಯ ಶಿರಾ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಸಾರ್ವಜನಿಕರಂತೆ ಕುಳಿತು ಮುಖ್ಯಮಂತ್ರಿಗಳು ಟೀ ಕುಡಿದಿದ್ದಾರೆ. ದಾವಣಗೆರೆಯಲ್ಲಿ ನಿನ್ನೆ ಮತ್ತು ಇಂದು ಬಿಜೆಪಿ ಕಾರ್ಯಕಾರಿಣಿ ಸಭೆ ಇರುವ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ದಾವಣಗೆರೆಗೆ ತೆರಳುತ್ತಿದ್ದರು. ಈ ವೇಳೆ ಸಿಎಂ, ಶಿರಾ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಟೀ ಸವಿದು ಮಾತು ಕತೆ ನಡೆಸಿದ್ದಾರೆ. ಇದನ್ನೂ ಓದಿ: ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿಈ ವೇಳೆ ಶಿರಾ ಶಾಸಕ ಡಾ.ರಾಜೇಶ್ ಗೌಡರೊಂದಿಗೆ ಕೆಲಕಾಲ ಚರ್ಚೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಎಸ್‍ಪಿ ರಾಹುಲ್ ಕುಮಾರ್ ಶಹಾಪುರ್ ಬಳಿ ಜಿಲ್ಲೆಯ ಬಗ್ಗೆ ಮಾಹಿತಿ ಪಡೆದು ಮಾತುಕತೆ ನಡೆಸಿದ್ದಾರೆ. ನಿನ್ನೆ ಸಂಜೆ 5.30 ವೇಳೆಗೆ ಆಗಮಿಸಿದ್ದ ಸಿಎಂ, ಸುಮಾರು ಅರ್ಧಗಂಟೆಗಳ ಕಾಲ ಚರ್ಚಿಸಿ ದಾವಣಗೆರೆಗೆ ತೆರಳಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ. ಇದನ್ನೂ ಓದಿ:  ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟ






 Advertisement 




Sign in to your account
Username or Email Address


Password

 Remember Me


