ವಿಜಯಪುರ: ನಗರದಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ನಡೆದಿದೆ. ಯಾರೋ ಬೈಕ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಪರಿಣಾಮ ಬೈಕ್ ಮೇಲಿಂದ ಬಿದ್ದು, ಗಾಯಗೊಂಡು ಯುವಕ, ಯುವತಿ ಒದ್ದಾಡಿದ್ದಾರೆ. ಅಲ್ಲದೆ ಸಹಾಯಕ್ಕಾಗಿ ಅಂಗಲಾಚಿದ ಹೃದಯವಿದ್ರಾವಕ ಘಟನೆ ನಡೆದಿದೆ.ನಗರದ ಜುಮನಾಳ ರಸ್ತೆಯ ದದಾಮಟ್ಟಿ ಕ್ರಾಸ್ ಬಳಿ ಘಟನೆ ನಡೆದಿದೆ. ಕಾಪಾಡುವಂತೆ ಯುವಕ, ಯುವತಿ ಅಂಗಲಾಚುತ್ತಿದ್ದ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಒದ್ದಾಡುತ್ತ, ಕಾಪಾಡಿ ಎಂದು ಬೈಕ್ ಸವಾರರಾದ ಸಚಿನ್, ಸುಜಾತಾ ಅಂಗಲಾಚಿದ್ದಾರೆ. ಕಾಲು ಮುರಿದು ರಕ್ತದ ಮಡುವಿನಲ್ಲಿ ಬಿದ್ದು ಯುವಕ ಸಚಿನ್ ಚೀರಾಟ ನಡೆಸಿದ್ದಾನೆ. ಇದನ್ನೂ ಓದಿ: ರೇವ್ ಪಾರ್ಟಿ- ಆ್ಯಪ್‍ನಲ್ಲಿ ಬುಕ್ಕಿಂಗ್ , ಇಬ್ಬರು ಅರೆಸ್ಟ್, 30 ಜನ ವಶಕ್ಕೆಕೊನೆಗೆ ಯುವಕ ಸಚಿನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಯುವತಿ ಸುಜಾತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಡಿ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿ ಸಚಿನ್ ಬಿಎಲ್‍ಡಿಇ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ. ತಿಕೋಟ ಪಟ್ಟಣದ ಮಠಪತಿ ಗಲ್ಲಿಯ ನಿವಾಸಿ ಸುಜಾತಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದಾರೆ. ನಿನ್ನೆ ಸಾಯಂಕಾಲ ಈ ಘಟನೆ ನಡೆದಿದ್ದು, ಅಪರಿಚಿತ ವಾಹನದಿಂದ ಡಿಕ್ಕಿಯಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


