ಕೊಪ್ಪಳ: ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಮಾಜಿ ಸಿಎಂ ಯಡಿಯೂರಪ್ಪ ಅಧಿಕಾರ ಹೋಗಿದೆ ಎಂದು ಕೊಪ್ಪಳದಲ್ಲಿ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಬಗ್ಗೆ ಮಾತನಾಡಿದ ಅವರು, ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅವರ ಅಧಿಕಾರ ಹೋಗಿದೆ. ಮೀಸಲಾತಿ ಕೊಡ್ತೀನಿ ಎಂದು ಯಡಿಯೂರಪ್ಪ ಅವರು ಮೀಸಲಾತಿ ಕೊಡಲಿಲ್ಲ. ಅದೇ ಕಾರಣಕ್ಕಾಗಿಯೇ ಅವರ ಅಧಿಕಾರ ಹೋಯ್ತು. ಸ್ವಾಮೀಜಿ ಅವರ ಶಾಪವೇ ಯಡಿಯೂರಪ್ಪ ಅವರಿಗೆ ತಟ್ಟಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:  ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?ಸ್ವಾಮೀಜಿಯನ್ನು 712 ಕಿಲೋ ಮೀಟರ್ ನಡೆಸೋ ಅವಶ್ಯಕತೆ ಇತ್ತಾ? ಮೀಸಲಾತಿ ಕೊಡ್ತೀನಿ ಎಂದು ಸುವರ್ಣ ಸೌಧದ ಮುಂದೆ ಮಾತು ಕೊಟ್ಟಿದ್ರು. ಮೀಸಲಾತಿ ಕೊಡಲಾರದಿದ್ದಕ್ಕೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿಗಾಗಿಯೇ ಯಡಿಯೂರಪ್ಪ ಅವರನ್ನು ಬೈದಿದ್ದು. ಅದು ಬಿಟ್ಟು ಯಾವುದೇ ವೈಯಕ್ತಿಕ ಕಾರಣಕ್ಕೆ ಅಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿSign in to your account
Username or Email Address


Password

 Remember Me


