ಚಿಕ್ಕೋಡಿ(ಬೆಳಗಾವಿ): ಎರಡೂವರೆ ವರ್ಷದ ಮಗುವೊಂದು ಬೋರ್​ವೆಲ್​ಗೆ ಬಿದ್ದು, ಪ್ರಾಣಬಿಟ್ಟಿರುವ ಕರುಣಾಜನಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ನಡೆದಿದೆ.ಶರತ್ ಸಿದ್ದಪ್ ಹಸರೆ (2) ಮೃತ ದುರ್ದೈವಿ. ನಿನ್ನೆ ಸಂಜೆಯಿಂದಲೇ ಮಗು ನಾಪತ್ತೆಯಾಗಿತ್ತು. ಕುಟುಂಬದವರು ಮಗುವಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಮನೆಯಿಂದ 200 ಮೀ. ದೂರದಲ್ಲಿ ಕೊರೆಸಿದ್ದ ಬೋರ್​ವೆಲ್​ಗೆ ಮಗು ಶರತ್ ಬಿದ್ದಿರುವುದು ತಿಳಿದುಬಂದಿದೆ. 15 ಅಡಿ ಆಳದಲ್ಲಿ ಮಗು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಮಗು ಶವವಾಗಿ ಪತ್ತೆಯಾಗಿದೆ. ಇದನ್ನೂ ಓದಿ: ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲುಆಟವಾಡುತ್ತ ಹೋಗಿ ಮನೆಯಿಂದ ನೂರು ಅಡಿ ದೂರದಲ್ಲಿದ್ದ ಬೋರ್​ವೆಲ್​ಗೆ ಶರತ್ ಬಿದ್ದಿದ್ದಾನೆ. ಆದರೆ ಮಗು ಕಾಣದಿರುವುದುನ್ನು ಗಮನಿಸಿದ ಪೋಷಕರು ಮಗು ಅಪಹರಣವಾಗಿರಬಹದು ಎಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೋಟದ ಮನೆಯಲ್ಲಿ ವಾಸವಿರುವ ಮಗು ಶರತ್ ತಂದೆ ಸಿದ್ದಪ್ಪ ಮತ್ತು ಕುಟುಂಟದವರು ಮಗು ಮನೆಯಿಂದ ಇನ್ನೂರು ಮೀಟರ್ ದೂರದಲ್ಲಿ ಕೊರೆಸಿದ್ದ ಬೋರ್​ವೆಲ್​ಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದರು. ಮಗುವನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!ಈ ವೇಳೆ ನಿನ್ನೆ ಕಾಣೆಯಾಗಿದ್ದ ಮಗು ಇಂದು ಬೋರ್​ವೆಲ್​ನಲ್ಲಿ ಶವವಾಗಿ ಪತ್ತೆಯಾಗಿದೆ. ಸುಮಾರು 7 ಅಡಿಗಳಷ್ಟು ಆಳದಲ್ಲಿ ಬೋರ್​ವೆಲ್​ನಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿ ಶಾಮಕದಳದ ಕಾರ್ಯಾಚರಣೆ, ಹಗ್ಗ ಬಿಟ್ಟು ಶವ ತೆಗೆಯಲಾಗಿದೆ. ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆ ಮಾಡಿ ಎಸೆಯಲಾಗಿದೆಯಾ ಅಥವಾ ಆಟವಾಡುತ್ತಾ ಬೋರ್​ವೆಲ್​ಗೆ ಬಿದ್ದಿದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Sign in to your account
Username or Email Address


Password

 Remember Me


