ಬೆಂಗಳೂರು: ನಗರದಲ್ಲಿ ಸಾಲು, ಸಾಲು ರಸ್ತೆ ಅಪಘಾತ ಪ್ರಕರಣಗಳು ನಡೆದರು ಯುವಕರ ಪುಂಡಾಟ ಕಡಿಮೆಯಾಗಿಲ್ಲ. ಮಿಡ್ ನೈಟ್ ವೇಳೆ ರಾಜರೋಷವಾಗಿ ರ್‍ಯಾಷ್ ಡ್ರೈವಿಂಗ್ ಮಾಡುತ್ತಾ, ಅಪಾಯಕ್ಕೆ ಆಹ್ವಾನ ಮಾಡುತ್ತಿದ್ದಾರೆ. ಇದನ್ನೂ ಓದಿ: ದೇವಸ್ಥಾನ ಕೆಡವಿ ಹಿಂದೂ ಧರ್ಮಕ್ಕೆ ದ್ರೋಹ: ದಿಂಗಾಲೇಶ್ವರ ಶ್ರೀಕಳೆದ ಒಂದು ವಾರದ ಹಿಂದೆ ಪುಡಾರಿಗಳು ಕುಡಿದು, ಪೊಲೀಸರ ಮೇಲೆಯೇ ಬೈಕ್ ಹತ್ತಿಸಿದ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಹನ ತಪಾಸಣೆಗೆ ನಿಂತಿದ್ದ ಪೊಲೀಸ್ ಪೇದೆಯನ್ನು ಬೈಕ್ ಸವಾರ ಗುದ್ದಿಕೊಂಡು ಹೋಗಿದ್ದಾನೆ. ಬೈಕ್ ಗುದ್ದಿದ ರಭಸಕ್ಕೆ ಹಾರಿ ಬಿದ್ದ ಪೊಲೀಸ್ ಪೇದೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.ಸೆಪ್ಟೆಂಬರ್ 10ನೇ ತಾರೀಖು ಮಧ್ಯರಾತ್ರಿ 12.30ಕ್ಕೆ ಈ ಘಟನೆ ನಡೆದಿದ್ದು, ಬೈಕ್ ಸವಾರನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಘಟನೆ ಸಂಪೂರ್ಣ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:  ವಿಕಲಚೇತನರಿಗೆ ತ್ರಿಚಕ್ರ ಮೋಟಾರು ಸೈಕಲ್‍ಗಳ ವಿತರಣೆSign in to your account
Username or Email Address


Password

 Remember Me


