ಬೆಂಗಳೂರು: ರಾಜ್ಯದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿಕೆ ಆಗ್ತಿದೆ. ಒಂದು ದಿನ ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾದ್ರೆ, ಇನ್ನೊಮದು ದಿನ ಸಾವಿರದ ಒಳಗಡೆ ಕೇಸ್ ಪತ್ತೆಯಾಗುತ್ತವೆ. ಇಂದು ರಾಜ್ಯದಲ್ಲಿ 889 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಜೊತೆಗೆ ರಾಜ್ಯದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಕೇಸ್ ಏರಿಳಿಕೆಯಿಂದ ಮತ್ತೆ ಕೊರೊನಾ ಏರಿಕೆ ಆಗುತ್ತಾ ಎಂಬ ಆತಂಕ ಶುರುವಾಗಿದೆ.ಬೆಂಗಳೂರಿನಲ್ಲಿ 263 ಕೇಸ್ ದಾಖಲಾಗಿದ್ದು, ಬೆಂಗಳೂರಿನಲ್ಲಿ ಕೊರೊನಾಗೆ 06 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕೂಡ ಕೇಸ್ ಮತ್ತೆ ಸಾವಿನ ಪ್ರಮಾಣ ಕಂಟ್ರೋಲ್ ನಲ್ಲಿ ಇದೆ. ಇನ್ನೂ ರಾಜ್ಯದ ಪಾಸಿಟಿವಿಟಿ ರೇಟ್ ಶೇ.0.63 ಇದೆ. ಕಳೆದ ಒಂದೂವರೆ ತಿಂಗಳಿನಿಂದ ಪಾಸಿಟಿವಿಟಿ ರೇಟ್ ಶೇ.1 ಒಳಗಡೆ ಇದೆ. ಇದನ್ನೂ ಓದಿ: ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರಿಡುವುದು ಸೂಕ್ತ: ಶೋಭಾರಾಜ್ಯದಲ್ಲಿ ಇಂದು 1080 ಜನ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ 222 ಜನ ಡಿಸ್ಚಾರ್ಜ್ ಆಗಿದ್ದು, ರಾಜ್ಯದ ಆಕ್ಟೀವ್ ಕೇಸ್ ಸಂಖ್ಯೆ 15,755ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ 7,491 ಕ್ಕೆ ಏರಿಕೆಯಾಗಿದೆ. ಜೊತೆಗೆ 1.38920 ಟೆಸ್ಟ್ ಆಗಿ 889 ಕೇಸ್ ದಾಖಲಾಗಿರುವುದು ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‍ನಲ್ಲಿ ಇದೆ. ಇದನ್ನೂ ಓದಿ:  ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 9, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 263, ಬೀದರ್ 2, ಚಾಮರಾಜನಗರ 10, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 25, ಚಿತ್ರದುರ್ಗ 11, ದಕ್ಷಿಣ ಕನ್ನಡ 133, ದಾವಣಗೆರೆ 8, ಧಾರವಾಡ 7, ಗದಗ 1, ಹಾಸನ 40, ಹಾವೇರಿ 0, ಕಲಬುರಗಿ 4, ಕೊಡಗು 45, ಕೋಲಾರ 19, ಕೊಪ್ಪಳ 0, ಮಂಡ್ಯ 18, ಮೈಸೂರು 74, ರಾಯಚೂರು 1, ರಾಮನಗರ 3, ಶಿವಮೊಗ್ಗ 37, ತುಮಕೂರು 27, ಉಡುಪಿ 86, ಉತ್ತರ ಕನ್ನಡ 44, ವಿಜಯಪುರ 0 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.ಇಂದಿನ 18/09/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/bAdNhm2vHh@CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/dX3ZfsEAds— K'taka Health Dept (@DHFWKA) September 18, 2021Sign in to your account
Username or Email Address


Password

 Remember Me


