ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ (Prajwal Revanna) ಕ್ಷಮಿಸಲಾರದಂತಹ ಅಪರಾಧ ಮಾಡಿದ್ದಾರೆ. ಅವರ ಪ್ರಕರಣ ಹೇಸಿಗೆ ಹುಟ್ಟಿಸಿದೆ. ಅವರು ಕ್ಷಮೆಗೆ ಅರ್ಹರಲ್ಲ, ಕ್ಷಮಿಸುವ ಪ್ರಶ್ನೆಯೇ ಇಲ್ಲ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಕಷ್ಟಡಿಗೆ ಕೊಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಇದೊಂದು ಗಂಭೀರ ಪ್ರಕರಣ. ಭಾರತದಂತಹ ದೇಶದಲ್ಲಿ ಮಹಿಳೆಯರನ್ನು ನಾವು ಗೌರವದಿಂದ ಕಾಣುತ್ತೇವೆ. ಈ ರೀತಿಯ ಘಟನೆ ನಡೆದಿರುವುದು ಹೇಸಿಗೆ ಹುಟ್ಟಿಸುವಂತಾಗಿದೆ, ಮನಸ್ಸಿಗೆ ಕಿರಿಕಿರಿ ಆಗುತ್ತಿದೆ. ಇದನ್ನು ಅತ್ಯಂತ ಕಟ್ಟುನಿಟ್ಟಾದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಲಿದೆ ಅನ್ನೋ ಭರವಸೆ ಇದೆ. ತ್ವರಿತ ಗತಿಯಲ್ಲಿ ತನಿಖೆ ಮುಗಿಸಿ ಗರಿಷ್ಠ ಶಿಕ್ಷೆ ಕೊಡುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಖುದ್ದು ವಿಚಾರಣೆಗೆ ಹಾಜರಾಗಿ – ರಾಹುಲ್‌ ಗಾಂಧಿಗೆ ಬೆಂಗಳೂರು ಕೋರ್ಟ್‌ ಸಮನ್ಸ್‌ಪ್ರಜ್ವಲ್ ರೇವಣ್ಣ ರಾಜ್ಯದ ಕ್ಷಮೆ ಕೇಳಿದ ವಿಚಾರ ಆರೋಪಿ ಸ್ಥಾನದಲ್ಲಿದ್ದವರು ಕ್ಷಮೆ ಕೇಳಿದ ಕೂಡಲೇ ಬಿಟ್ಟುಬಿಡೋಕೆ ಆಗುತ್ತದೆಯೇ? ಯಾಕೆ ಕ್ಷಮೆ ಕೇಳಿದರು ಅಂತ ಪ್ರಜ್ವಲ್ ಉತ್ತರ ಕೊಡಲಿ, ಅವರು ಕ್ಷಮೆ ಕೇಳುವುದಿದ್ದರೆ ಸಂತ್ರಸ್ಥರ ಕ್ಷಮೆ ಕೇಳಲಿ ಪ್ರಜ್ವಲ್‌ಗೆ ಆಗುವ ಶಿಕ್ಷೆ ಆಗಲೇಬೇಕು. ಪೆನ್‌ಡ್ರೈವ್‌ ಹಂಚಿಕೆ ಇತ್ಯಾದಿಗಳನ್ನ ನೋಡಿದಾಗ ಪ್ರಜ್ವಲ್ ಕ್ಷಮೆಗೆ ಅರ್ಹರಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು: ಇಂದಿನಿಂದ ಜೂ.6 ವರೆಗೆ ಮೂರು ದಿನ ಮದ್ಯ ಮಾರಾಟಕ್ಕೆ ನಿಷೇಧSign in to your account
Username or Email Address


Password

 Remember Me


