ಕಲಬುರಗಿ: ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ನಡೆದಿದೆ.ಬಳೂರ್ಗಿ ಗ್ರಾಮದ ರೈತ ಇರಸಂಗಪ್ಪ ಬಾಲಕುಂದಿ ಅವರಿಗೆ ಸೇರಿದ ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ನಿನ್ನೆ ರಾತ್ರಿ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಭಾರತ ದೇಶ ಪಾತಾಳಕ್ಕೆ ಕುಸಿಯಲು ಕಾಂಗ್ರೆಸ್ ಕಾರಣ: ಶ್ರೀ ರಾಮುಲುರಾತ್ರಿ ಸುಮಾರು 12 ಗಂಟೆಗೆ ಯಾರೂ ಇಲ್ಲದ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಎತ್ತುಗಳಿಗೆ ದುಷ್ಕರ್ಮಿಗಳು ಬಡಿಗೆಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಹಲ್ಲೆಯಿಂದ ಒಂದು ಎತ್ತಿನ ಮೂಗು, ಮೈಮೇಲೆ ರಕ್ತ ಬಂದಿದೆ. ಇನ್ನೊಂದು ಎತ್ತು ಸಂಪೂರ್ಣವಾಗಿ ಕುಸಿದು ಬಿದ್ದು ಮೇವನ್ನು ಸಹ ತಿನ್ನದಂತಾಗಿದೆ. ಇದನ್ನೂ ಓದಿ: ಸ್ಪೈಡರ್ ಮ್ಯಾನ್‍ನಂತೆ ಗೋಡೆ ಹತ್ತುವ ಬಾಲಕಿ – ವೀಡಿಯೋ ವೈರಲ್ಸ್ಥಳಕ್ಕೆ ಪಶು ವೈದ್ಯರು ಬಂದು ಚಿಕಿತ್ಸೆ ನೀಡಿದರೂ ಸದ್ಯ ಜೋಡೆತ್ತುಗಳ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎತ್ತುಗಳ ಸ್ಥಿತಿಯನ್ನು ನೋಡಿ ರೈತ ಇರಸಂಗಪ್ಪ ಕಣ್ಣೀರು ಹಾಕುತ್ತಿದ್ದಾರೆ.ನಾನು ಎತ್ತುಗಳನ್ನೇ ನಂಬಿಕೊಂಡು ಬದುಕುತ್ತಿದ್ದೇನೆ. 2 ಲಕ್ಷ ಬೆಲೆಬಾಳುವ ಎತ್ತುಗಳಿಗೆ ಜೀವ ಹೋಗುವಂತೆ ಉದ್ದೇಶಪೂರ್ವಕವಾಗಿಯೇ ಹೊಡೆದಿದ್ದಾರೆ. ಮನುಷ್ಯರಿಗೆ ನೋವಾದರೆ ಹೇಳಿಕೊಳ್ಳುತ್ತಾರೆ. ಮೂಕ ಪ್ರಾಣಿಗಳು ತಮ್ಮ ವೇದನೆಯನ್ನು ಯಾರ ಮುಂದೆಯೂ ಹೇಳಿಕೊಳ್ಳಲಾಗದು. ಈ ಕೂಡಲೇ ಎತ್ತುಗಳ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


