ಬೆಂಗಳೂರು: ರಾಜ್ಯದಲ್ಲಿ ಇಂದು 1,003 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 18 ಮಂದಿ ಸಾವನ್ನಪ್ಪಿದ್ದು, 1,119 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಇಂದು ಶೂನ್ಯ ಪ್ರಕರಣ ವರದಿಯಾಗಿದೆ.ರಾಜ್ಯದಲ್ಲಿ ಒಟ್ಟು 15,960 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,66,194 ಮಂದಿಗೆ ಕೊರೊನಾ ಬಂದಿದೆ. 29,12,633 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.67ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.79ರಷ್ಟಿದೆ. ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಶುರುವಾಯಿತು ಜೋಕುಮಾರನ ಆರಾಧನೆಇಂದು ರಾಜ್ಯದಲ್ಲಿ ಒಟ್ಟು 23 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,48,496 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,17,226 + 31,270 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 310 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 6 ಜನ ಮರಣ ಹೊಂದಿದ್ದಾರೆ. 276 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರಂಟಿ ಕೇಳ್ತೀವಿ, ಲಸಿಕೆಗೆ ಗ್ಯಾರಂಟಿ ಬೇಡ್ವಾ: ಅಧಿಕಾರಿಗಳಿಗೆ ಯುವಕನ ಪ್ರಶ್ನೆಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ, ಬೀದರ್, ಹಾವೇರಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಳ್ಳಾರಿ 4, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 15, ಬೆಂಗಳೂರು ನಗರ 310, ಚಾಮರಾಜನಗರ 4, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 37, ಚಿತ್ರದುರ್ಗ 10, ದಕ್ಷಿಣ ಕನ್ನಡ 124, ದಾವಣಗೆರೆ 3, ಧಾರವಾಡ 9, ಹಾಸನ 48, ಕಲಬುರಗಿ 5, ಕೊಡಗು 96, ಕೋಲಾರ 14, ಮಂಡ್ಯ 31, ಮೈಸೂರು 46, ರಾಮನಗರ 2, ಶಿವಮೊಗ್ಗ 27, ತುಮಕೂರು 61, ಉಡುಪಿ 94, ಉತ್ತರ ಕನ್ನಡ 35, ಮತ್ತು ಯಾದಗಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.






 Advertisement 




Sign in to your account
Username or Email Address


Password

 Remember Me


