ಹುಬ್ಬಳ್ಳಿ: ಜಮೀನಿನಲ್ಲಿ ಗಾಂಜಾ ಬೆಳೆದ ಕುಂದಗೋಳ ತಾಲೂಕಿನ ಮೂವರು ರೈತರನ್ನು ಪೊಲೀಸರು ಬಂಧಿಸಿದ್ದಾರೆ.ಗುಡಗೇರಿ ಠಾಣೆಯ ಸಿಬ್ಬಂದಿಗೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬುಕೊಪ್ಪ ಗ್ರಾಮದ ಸರಹದ್ದಿನಲ್ಲಿ ಮೂವರು ರೈತರು ಹೊಲದಲ್ಲಿ ಗಾಂಜಾ ಬೆಳೆ ಬೆಳೆದಿದ್ದರು. ಇದನ್ನೂ ಓದಿ:  ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್ಖಚಿತ ಮಾಹಿತಿ ಮೇರೆಗೆ ಬುಕೊಪ್ಪ ಗ್ರಾಮದ ಸರಹದ್ದಿನ ಮಾಲತೇಶಪ್ಪ ನಿಂಗಪ್ಪ ಕಿತ್ತೂರ್ ಅವರ ಹೊಲದಲ್ಲಿ 31 ಕೆ.ಜಿ. ಮತ್ತು ರುದ್ರಪ್ಪ ಅಡಿವೆಪ್ಪ ಪೂಜಾರ್ ಅವರ ಹೊಲದಲ್ಲಿ 20 ಕೆ.ಜಿ ಮತ್ತು ನಿಂಗಪ್ಪ ಕುಬೇರಪ್ಪ ಕರಿಕೆಣ್ಣವರ ಹೊಲದಲ್ಲಿ 8.30 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್ಪಿಎಸ್‍ಐ ಸವಿತಾ ಮುನ್ಯಾಳ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸಿಬ್ಬಂದಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶೋಕ್ ಶಿಗ್ಗಾಂವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.Sign in to your account
Username or Email Address


Password

 Remember Me


