ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ಕಾರ್ ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಉಣಕಲ್ ಕೆರೆ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ ಎದುರಿನಲ್ಲಿ ನಡೆದಿದೆ.ಕಾರಿನ ಬೆಂಕಿಯ ಕೆನ್ನಾಲಿಗೆ ರಸ್ತೆಯುದ್ದಕ್ಕೂ ಹರಡಿದ್ದು, ಹೋಟೆಲ್‍ನಲ್ಲಿರುವ ಗ್ರಾಹಕರು ಆತಂಕದಿಂದ ಹೊರಗೆ ಬಂದು ನೋಡುವಂತಾಗಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಇದನ್ನೂ ಓದಿ: 100 ಟನ್, 20 ಅಡಿ ಉದ್ದದ ರೇಣುಕಾಚಾರ್ಯರ ಪ್ರತಿಮೆಯ ಶಿಲೆ 100 ಚಕ್ರದ ಲಾರಿಯಲ್ಲಿ ರಂಭಾಪುರಿ ಮಠಕ್ಕೆ ಆಗಮನಕಾರಿನ ಮಾಲೀಕರ ಬಗ್ಗೆ ಮಾಹಿತಿ ಲಭ್ಯವಾಗಬೇಕಿದ್ದು. ಕಾರ್ ಏಕಾಏಕಿ ಹೊತ್ತಿ ಉರಿಯಲು ಕಾರಣ ಏನು ಎಂಬುದು ಸಹ ಇನ್ನೂ ತಿಳಿದುಬಂದಿಲ್ಲ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ.Sign in to your account
Username or Email Address


Password

 Remember Me


