ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆ ಸಕ್ಕರೆ ನಾಡು ಮಂಡ್ಯದ ಅಭಿಮಾನಿಗಳು ಅವರಿಗಾಗಿ ಒಂದು ಸ್ಪೆಷಲ್ ಸಾಂಗ್ ರಚಿಸಿ ಅದನ್ನು ಗಿಫ್ಟ್ ಆಗಿ ನೀಡುತ್ತಿದ್ದಾರೆ.ಇಂದು ಮೋದಿ ಹುಟ್ಟುಹಬ್ಬವಾಗಿರುವುದರಿಂದ ಮಂಡ್ಯದ ಅಭಿಮಾನಿಗಳು ಚಪ್ಪಾಳೆ ಗೀತೆಗೆ ವಿಶೇಷ ಸಾಹಿತ್ಯ ರಚನೆ ಮಾಡಿದ್ದು, ಅದಕ್ಕೆ ‘ನಮೋ’ ಎಂದು ಹೆಸರಿಟ್ಟಿದ್ದಾರೆ. ಆ ಗೀತೆಗೆ ನಾಗರಾಜ್ ಮೂರ್ತಿ ಅವರು ಸಾಹಿತ್ಯವನ್ನು ರಚಿಸಿದ್ದು, ಆರ್.ಶಂಕರ್ ಈ ಸ್ಪೆಷಲ್ ಸಾಂಗ್ ಗೆ ಧ್ವನಿ ನೀಡಿದ್ದಾರೆ. ಅನಿಲ್ ಮರೀಗೌಡ ಸಹಾಯದಲ್ಲಿ ಈ ವಿಶೇಷ ಗೀತೆ ಮೂಡಿಬರುತ್ತಿದೆ. ಇದನ್ನೂ ಓದಿ: ನರೇಂದ್ರ ಮೋದಿ ಹುಟ್ಟುಹಬ್ಬ- ಶುಭ ಕೋರಿದ ಎಚ್‍ಡಿಡಿ, ಎಚ್‍ಡಿಕೆಈ ‘ನಮೋ’ ಗೀತೆ 3 ನಿಮಿಷ 40 ಸೆಕೆಂಡ್ ಇದ್ದು, ಮೈಸೂರಿನ ಎಂಡ್ಯೂರೆನ್ಸ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ. ಮಂಡ್ಯದ ಪಾಲನೇತ್ರ ಅವರು ಈ ಗೀತೆಯ ಸಂಕಲನ ಮಾಡಿದ್ದಾರೆ. ಇದನ್ನೂ ಓದಿ:   ಪಾಯಸ ವಿತರಿಸಿ ಮೋದಿ ಹುಟ್ಟುಹಬ್ಬ ಆಚರಿಸಿದ ಉಡುಪಿಯ ಕಿಣಿ ಹೋಟೆಲ್ಮೋದಿ ಹುಟ್ಟುಹಬ್ಬ ಇರುವುದರಿಂದ ಈ ವಿಶೇಷ ಗೀತೆಯನ್ನು ಟ್ವಿಟರ್, ಇಮೇಲ್, ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ರವಾನೆ ಮಾಡಲಾಗುತ್ತಿದೆ.Sign in to your account
Username or Email Address


Password

 Remember Me


