ಹಾಸನ: ಕೊರೊನಾ ಕಾರಣದಿಂದ ಈ ವರ್ಷವೂ ಕೂಡ ಕತ್ತರಿಘಟ್ಟ ಜಾತ್ರಾಮಹೋತ್ಸವವನ್ನು ರದ್ದು ಪಡಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.\ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಸಮೀಪ ಇರುವ ಕತ್ತರಿಘಟ್ಟ ಗ್ರಾಮದಲ್ಲಿ ಇದೇ ತಿಂಗಳು 17 ಮತ್ತು 18 ರಂದು ಜಾತ್ರಾಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಕತ್ತರಿಘಟ್ಟ ಗ್ರಾಮದ ಶ್ರೀ ಲಕ್ಷ್ಮಿದೇವಿ ಜಾತ್ರಾಮಹೋತ್ಸವವು ಕತ್ತರಿಘಟ್ಟ ಜಾತ್ರಾಮಹೋತ್ಸವ ಎಂದೇ ಪ್ರಸಿದ್ಧಿಯಾಗಿದೆ. ಇದನ್ನೂ ಓದಿ:  ನಾಯಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆಯ್ತು ಚಿರತೆ!ಪ್ರತಿ ವರ್ಷ ಸಾವಿರಾರು ಜನ ಈ ಜಾತ್ರೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ ಹಾಸನದಲ್ಲಿ ಕೊರೊನಾ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಜಾತ್ರಾಮಹೋತ್ಸವ ನಡೆಸದಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದೆ. ಇದನ್ನೂ ಓದಿ:  ಮೋದಿ ಹುಟ್ಟುಹಬ್ಬ – 71 ನದಿಗಳಲ್ಲಿ ಸ್ವಚ್ಛತಾ ಕಾರ್ಯಗ್ರಾಮಸ್ಥರು ಜಾತ್ರಾಮಹೋತ್ಸವ ರದ್ದು ಮಾಡಲು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಕಾರಣದಿಂದ ಕಳೆದೆರೆಡು ವರ್ಷದಿಂದ ಜಾತ್ರೆ ಸರಿಯಾಗಿ ನಡೆದಿಲ್ಲ. ಹೀಗಿರುವಾಗ ಈ ವರ್ಷವೂ ಜಾತ್ರಾಮಹೋತ್ಸವ ರದ್ದು ಮಾಡುವುದು ಸರಿಯಲ್ಲ. ರೋಗದ ವಿರುದ್ಧ ಹೋರಾಡಲು ದೈವಿಶಕ್ತಿಯೂ ಬೇಕಾಗಿದ್ದು, ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಜಾತ್ರಾಮಹೋತ್ಸವ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.Sign in to your account
Username or Email Address


Password

 Remember Me


