ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.ನಿರ್ಮಾಪಕ ಜಾಕ್ ಮಂಜು ‘ವಿಕ್ರಾಂತ್ ರೋಣ’ ಸಿನಿಮಾ ಕುರಿತು ಮಾತನಾಡಿದ್ದು, ಪರಿಸ್ಥಿತಿ ಸರಿಯಾಗಿದ್ದರೆ ಡಿಸೆಂಬರ್‍ನಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತೇವೆ. ಡಿಸೆಂಬರ್‍ನಲ್ಲಿ ರಿಲೀಸ್ ಮಾಡುವ ಉದ್ದೇಶ ಇಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಆದರೆ ದಿನಾಂಕವನ್ನು ನಾವು ಘೋಷಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್ದಿನಾಂಕ ಹೇಳಿ ಮತ್ತೆ ಮುಂದೆ ಹೋಗುವುದು ನಮಗೆ ಇಷ್ಟವಿಲ್ಲ. ಸಿನಿಮಾ ಬಿಡುಗಡೆಗೆ ಇನ್ನೂ 10 ದಿನ ಇದೆ ಎಂದಾಗ ದಿನಾಂಕ ಕುರಿತು ನಾವು ಹೇಳುತ್ತೇವೆ ಎಂದು ಹೇಳಿದ್ದಾರೆ.ಈ ಸಮಯಕ್ಕೆ ಬೇರೆ ರಾಜ್ಯಗಳ ಚಿತ್ರರಂಗದಸ್ಥಿತಿಯನ್ನ ನೋಡಿ ಆ ಭಾಷೆಗಳಲ್ಲಿ ರಿಲೀಸ್ ಮಾಡುವುದರ ಬಗ್ಗೆ ನಾವು ಯೋಚಿಸುತ್ತೇವೆ. ಅಂಧ್ರದಲ್ಲಿ 100% ಸೀಟು ಭರ್ತಿಗೆ ಆದೇಶ ಬರಲಿದೆ. ಅದು ಅಲ್ಲದೇ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡಲು ಸಾಕಷ್ಟು ಖರ್ಚು ಮಾಡಬೇಕು. ಇವೆಲ್ಲ ಸೇರಿ ಸಿನಿಮಾದ ಬಜೆಟ್ 100 ಕೋಟಿ ರೂ. ಆಗಬಹುದು ಎಂದಿದ್ದಾರೆ. ಇದನ್ನೂ ಓದಿ: ಮಗನಿಗೆ 6 ತಿಂಗಳು ತುಂಬಿರೋ ಸಂಭ್ರಮ- ಮುಯೂರಿ ಫೋಟೋಶೂಟ್ಓಟಿಟಿಗಳಿಂದ ನಮಗೆ ಸಾಕಷ್ಟು ಆಫರ್ ಬರುತ್ತಿದೆ. ಆದರೆ ನಾವು ಅಲ್ಲಿ ಈ ಸಿನಿಮಾವನ್ನು ಬಿಡುವುದಿಲ್ಲ. ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ. ಬಳಿಕ ಜನರ ಪ್ರತಿಕ್ರಿಯೆ ನೋಡಿಕೊಂಡು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತೇವೆ. ಸುದೀಪ್ ಅವರು ಈಗಾಗಲೇ ಕನ್ನಡದಲ್ಲಿ ಡಬ್ಬಿಂಗ್ ಮುಗಿಸಿದ್ದಾರೆ. ಮಲಯಾಳಂ ಬಿಟ್ಟು, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಕಿಚ್ಚ ಅವರೇ ಧ್ವನಿ ನೀಡುತ್ತಿದ್ದಾರೆ ಎಂದರು. ಇದನ್ನೂ ಓದಿ:  ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್Sign in to your account
Username or Email Address


Password

 Remember Me


