ಹುಬ್ಬಳ್ಳಿ: ಹೃದಯಾಘಾತದಿಂದ ಮೃತಪಟ್ಟ ಸ್ನೇಹಿತನ ಪಾರ್ಥಿವ ಶರೀರ ಕಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಬಾಲ್ಯದಿಂದಲೂ ಆಪ್ತ ಸ್ನೇಹಿತ ಹಾಗೂ ಅಳಿಯನಾಗಿದ್ದ ರಾಜು ಪಾಟೀಲ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇಂದು ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸ್ನೇಹಿತನ ಅಂತಿಮ ದರ್ಶನ ಪಡೆದು ಬಿಕ್ಕಿ ಬಿಕ್ಕಿ ಅತ್ತರು.  ಇದನ್ನೂ ಓದಿ:ಜಗಳ ಬಿಡಿಸಲು ಹೋದ ಕಾನ್‍ಸ್ಟೇಬಲ್ ತಲೆಗೆ ಕಲ್ಲಿನಿಂದ ಹಲ್ಲೆಹುಬ್ಬಳ್ಳಿಯ ಶಕ್ತಿನಗರದ ನಿವಾಸಿಯಾಗಿದ್ದ ರಾಜು ಪಾಟೀಲ ಮೃತಪಟ್ಟ ಪರಿಣಾಮ ಬಸವರಾಜ ಬೊಮ್ಮಾಯಿ ದುಃಖ ತೃಪ್ತರಾಗಿದ್ದು, ಅವರ ಈಡೀ ಕುಟುಂಬ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಕಣ್ಣೀರು ಸುರಿಸಿದರು.ಸಹೋದರ ಸಂಬಂಧಿ ಹಾಗೂ ಆಪ್ತ ಸ್ನೇಹಿತ ರಾಜು ಪಾಟೀಲ್ ಅವರು ಇಂದು ನಿಧನರಾಗಿದ್ದು, ನಾನು ತುಂಬಾ ದುಃಖಿತನಾಗಿದ್ದೇನೆ. ರಾಜು ಪಾಟೀಲ್ ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ರಾಜು ಪಾಟೀಲ್ ಒಬ್ಬ ಆಪ್ತ ಮಿತ್ರರಾಗಿದ್ದರು. ನಾವಿಬ್ಬರು ಬಾಲ್ಯದಿಂದ ಕೂಡಿಯೇ ಬೆಳೆದವರು. ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಅವರು ಸದಾ ನನ್ನ ಜತೆ ಇರುತ್ತಿದ್ದರು. pic.twitter.com/oRVuHAjuui— Basavaraj S Bommai (@BSBommai) September 15, 2021ಪತ್ನಿ, ಪುತ್ರ, ಪುತ್ರಿ ಸಹೋದರಿಯೊಂದಿಗೆ ಹುಬ್ಬಳ್ಳಿಗೆ ಆಗಮಿಸಿರುವ ಬೊಮ್ಮಾಯಿ ರಾಜು ಪಾಟೀಲ ಪತ್ನಿ ಹಾಗೂ ಕುಟುಂಬಸ್ಥರನ್ನು ಸಮಾಧಾನಪಡಿಸಿದರು. ಸಂಜೆ ನಡೆಯುವ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಬೊಮ್ಮಾಯಿ ಭಾಗವಹಿಸಲಿದ್ದಾರೆ.  ಇದನ್ನೂ ಓದಿ:ಇಂದು ಮಧ್ಯಾಹ್ನ ಬೆಂಗಳೂರಿಗೆ ಬರಲಿದ್ದಾರೆ ರಾಹುಲ್ ಗಾಂಧಿSign in to your account
Username or Email Address


Password

 Remember Me


