ದಾವಣಗೆರೆ: ಜಗಳ ಬಿಡಿಸಲು ಹೋದ ಪೊಲೀಸ್ ಕಾನ್‍ಸ್ಟೇಬಲ್ ಅವರಿಗೆ ಕಲ್ಲಿನಲ್ಲಿ ಹೊಡೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.ಹನುಮಂತಪ್ಪ ಗಾಯಗೊಂಡ ಪೊಲೀಸ್ಕಾನ್‍ಸ್ಟೇಬಲ್‍. ಜಿಲ್ಲೆಯ ಮಾಯಕೊಂಡ ಹೋಬಳಿಯ ಹಿರೇತೊಗಲೆರಿ ಗ್ರಾಮದಲ್ಲಿ ಹಬ್ಬದ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳ ನಡೆದು, ಕೈ ಕೈ ಮಿಲಾಯಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಯಕೊಂಡ ಠಾಣೆಯ ಕಾನ್‍ಸ್ಟೇಬಲ್‍ ಹನುಮಂತಪ್ಪ ಜಗಳವಾಡುತ್ತಿದ್ದವರನ್ನು ಬಿಡಿಸಿ ಜೀಪಿಗೆ ಹತ್ತಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲೇ ಶುಶ್ರುಕಿ ಆತ್ಮಹತ್ಯೆಗೆ ಯತ್ನ
ಜೀಪಿಗೆ ಹತ್ತಿಸುವ ವೇಳೆಯಲ್ಲಿ ನಿವೃತ್ತ ಎಎಸ್‍ಐ ರುದ್ರಪ್ಪ ಕುಟುಂಬಸ್ಥರು ಪೊಲೀಸ್ ಕಾನ್‍ಸ್ಟೇಬಲ್‍ ಹನುಮಂತಪ್ಪ ಅವರ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ. ಗಾಯಗೊಂಡಿರುವ ಹನುಮಂತಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿರುವ ನಿವೃತ್ತ ಎಎಸ್‍ಐ ಕುಟುಂಬದ ವಿರುದ್ಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆಎಸ್ ಪಿ ರಿಷ್ಯಂತ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಸೋನು ಸೂದ್ ಕಚೇರಿ ಮೇಲೆ ಐಟಿ ದಾಳಿ
 Advertisement 




 Advertisement 









 Advertisement 




ಜೀಪಿಗೆ ಹತ್ತಿಸುವ ವೇಳೆಯಲ್ಲಿ ನಿವೃತ್ತ ಎಎಸ್‍ಐ ರುದ್ರಪ್ಪ ಕುಟುಂಬಸ್ಥರು ಪೊಲೀಸ್ ಕಾನ್‍ಸ್ಟೇಬಲ್‍ ಹನುಮಂತಪ್ಪ ಅವರ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ. ಗಾಯಗೊಂಡಿರುವ ಹನುಮಂತಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿರುವ ನಿವೃತ್ತ ಎಎಸ್‍ಐ ಕುಟುಂಬದ ವಿರುದ್ಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆಎಸ್ ಪಿ ರಿಷ್ಯಂತ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಸೋನು ಸೂದ್ ಕಚೇರಿ ಮೇಲೆ ಐಟಿ ದಾಳಿSign in to your account
Username or Email Address


Password

 Remember Me


