ಚಾಮರಾಜನಗರ: ತನ್ನ ಎರಡು ಮರಿಗಳನ್ನು ಕೂಗಿ ಅರಸುತ್ತಾ ಹುಲಿಯೊಂದು ಗಾಂಭೀರ್ಯದಿಂದ ನಡೆದು ಬಂದು ಸಫಾರಿಗರನ್ನು ರೋಮಾಂಚನಗೊಳಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕಂಡುಬಂದಿದೆ. ಎರಡು ದಿನಗಳ ಹಿಂದೆ ನಡೆದಿರುವ ಈ ಘಟನೆಯ ವೀಡಿಯೋ ಸದ್ಯ ವೈರಲಾಗಿದೆ.ಬಂಡೀಪುರದ ಬಸವನಕಟ್ಟೆ ಎಂಬಲ್ಲಿ ಪ್ರವಾಸಿಗರಿಗೆ ಸಿಕ್ಕ ‘ಸುಂದರಿ’ ಎಂಬ ಹುಲಿಯು ಘರ್ಜಿಸುತ್ತಾ ಮರಿಗಳನ್ನು ಕೂಗಿ ಕರೆಯುತ್ತಿರುವ ವೀಡಿಯೋವನ್ನು ಸಫಾರಿಯಲ್ಲಿ ಪ್ರವಾಸಿಗರು ಸೆರೆ ಹಿಡಿದಿದ್ದು, 10 ನಿಮಿಷಕ್ಕೂ ಹೆಚ್ಚು ಸಮಯ ಹುಲಿ ದರ್ಶನ ನೀಡಿದೆ ಎಂದು ತಿಳಿದುಬಂದಿದೆ.ಸುಂದರಿಗೆ ಎರಡು ಮರಿಗಳಿದ್ದು, ಅವುಗಳನ್ನು ಕೂಗಿ ಕರೆಯುತ್ತಿತ್ತು. 10-15 ನಿಮಿಷಗಳ ಬಳಿಕ ತಾಯಿಯನ್ನು ಅವು ಸೇರಿಕೊಂಡವು. ಪ್ರವಾಸಿಗರು ವ್ಯಾಘ್ರನನ್ನು ಕಂಡು ಬಲು ರೋಮಾಂಚನಗೊಂಡರು ಎಂದು ಸ್ಥಳೀಯ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಇಲಿ ವಿಷದಿಂದ ಹಲ್ಲುಜ್ಜಿ ಪ್ರಾಣ ಬಿಟ್ಟ 18ರ ಯವತಿಸದ್ಯ ಬಂಡೀಪುರದ ಹುಲಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಇದನ್ನೂ ಓದಿ: ರಮ್ಯಾ ಸೌಂದರ್ಯವನ್ನು ಹಾಡಿಹೊಗಳಿದ ಅಭಿಮಾನಿಗಳು






 Advertisement 




Sign in to your account
Username or Email Address


Password

 Remember Me


