ಬಾಗಲಕೋಟೆ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈನಿಕನೊಬ್ಬ ಚಿಕಿತ್ಸೆ ಫಲಿಸದೇ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಹನಮಂತ ಸಿದ್ರಾಮಪ್ಪ ಹಡಪದ(33) ಮೃತಪಟ್ಟ ದುರ್ದೈವಿ. ಬಾದಾಮಿಯಿಂದ ಪಟ್ಟದಕಲ್ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ನಂದಿಕೇಶ್ವರ ಗ್ರಾಮದ ಹತ್ತಿರ ಪಲ್ಸರ್ ಬೈಕ್‍ನಲ್ಲಿ ವೇಗವಾಗಿ ಬಂದ ಮಂಜುನಾಥ ಮಾಗುಂಡಪ್ಪ ಜತ್ತಿ, ಸೈನಿಕ ತೆರಳುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದ್ದ. ಕಳೆದ ಸೆ.8 ರಂದು ಘಟನೆ ನಡೆದಿತ್ತು. ಇದನ್ನೂ ಓದಿ: ESI ಆಸ್ಪತ್ರೆಯಿಂದ ಜಯದೇವ ಹೃದ್ರೋಗ ಘಟಕ ಸ್ಥಳಾಂತರ- ಸುರೇಶ್ ಕುಮಾರ್ ಸ್ಪಷ್ಟನೆತಲೆಗೆ ತೀವ್ರ ಪೆಟ್ಟಾಗಿ, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಹನಮಂತ ಹಡಪದ ಅವರನ್ನು ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದು, ಈ ಕುರಿತು ಮೃತ ಸೈನಿಕನ ಪತ್ನಿ ಶಶಿಕಲಾ ಹಡಪದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್‍ಐ ನೇತ್ರಾವತಿ ಪಾಟೀಲ್ ತಿಳಿಸಿದ್ದಾರೆ.Sign in to your account
Username or Email Address


Password

 Remember Me


