ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‍ನಲ್ಲಿ ಕಾರು-ಬೈಕ್ ನಡುವೆ ಭೀಕರ ಅಪಘಾತ ನಡೆದ ಜಾಗದಲ್ಲೇ ಈಗ ಮತ್ತೊಂದು ಅಪಘಾತವಾಗಿದೆ.ಮಂಗಳವಾರ ರಾತ್ರಿ 9:15 ಸುಮಾರಿಗೆ ಕಾರು ಗುದ್ದಿದ ರಭಸಕ್ಕೆ ಸವಾರ ಮತ್ತು ಸ್ನೇಹಿತೆ ಫ್ಲೈಓವರ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.ಕಾರು ಬೈಕ್ ಗೆ ಗುದ್ದಿದ್ದು, ಫ್ಲೈಓವರ್ ಮೇಲೆ ಮತ್ತು ಕೆಳಭಾಗದಲ್ಲಿ ವಾಹನಗಳ ಬಿಡಿಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದೆ. ಫ್ಲೈಓವರ್ ಕೆಳಭಾಗದಲ್ಲಿ ಕಾರ್ ನ ಬಿಡಿಭಾಗಗಳು ಬಿದ್ದಿದ್ದ ಜಾಗದಲ್ಲೇ ನಿನ್ನೆ ತಡರಾತ್ರಿ ಮತ್ತೊಂದು ಅಪಘಾತ ಸಂಭವಿಸಿದೆ. ಲಾರಿ ಮತ್ತು ಬೈಕ್ ನಡುವೆ ಅಪಘಾತವಾಗಿದ್ದು, ಬೈಕ್ ಸವಾರನ ತಲೆಗೆ ಗಾಯವಾಗಿದೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಬನ್ನಿ – ಕಾಲೇಜ್‌, ಕೋರ್ಸ್‌ಗಳ ಬಗ್ಗೆ ಉಚಿತವಾಗಿ ಮಾಹಿತಿ ಪಡೆದುಕೊಳ್ಳಿಪೊಲೀಸರು ಬ್ಯಾರಿಕೇಡ್ ಹಾಕಿದ್ದ ಸ್ಥಳದಲ್ಲಿ ಆಕ್ಸಿಡೆಂಟ್ ಆಗಿದೆ. ಬ್ಯಾರಿಕೇಡ್ ಪಕ್ಕದಲ್ಲಿ ತೆರಳುತ್ತಿದ್ದ ಬೈಕಿಗೆ ಟಿಪ್ಪರ್ ಲಾರಿ ಗುದ್ದಿದ್ದು ಸವಾರ ಕೆಳಕ್ಕೆ ಬಿದ್ದಿದ್ದಾರೆ. ಬೈಕ್‍ಗೆ ಗುದ್ದಿದ ಲಾರಿ ಚಾಲಕ ಸ್ಥಳದಿಂದ ಲಾರಿ ಸಮೇತ ಪರಾರಿಯಾಗಿದ್ದು, ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ:  1 ವರ್ಷದ ಬಳಿಕ ಕೇರಳ ವಿಮಾನ ದುರಂತಕ್ಕೆ ಕಾರಣ ಸಿಕ್ತು- ತನಿಖಾ ವರದಿಯಲ್ಲಿ ಏನಿದೆ?Sign in to your account
Username or Email Address


Password

 Remember Me


