ವಿಜಯಪುರ: ಹಾಸ್ಯ ನಟ ರಾಜು ತಾಳಿಕೋಟೆ ಮೇಲೆ ಮಾರಾಣಾಂತಿಕ ಹಲ್ಲೆ ಜೊತೆಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಸದ್ಯ ರಾಜು ತಾಳಿಕೋಟಿ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಅತ್ತ ರಾಜು ತಾಳಿಕೋಟೆ ಅಕ್ಕನ ಮಗನ ಹೆಂಡತಿ ಸನಾಗೆ ರಾಜು ತಾಳಿಕೋಟಿ ವಿಷ ಕುಡಿಸಿರುವುದಾಗಿ ಆರೋಪಿಸಿ ಸನಾ ದೂರು ದಾಖಲಿಸಿದ್ದಾರೆ. ಇತ್ತ ರಾಜು ತಾಳಿಕೋಟೆ ಕೂಡ ಶೇಖ್ ಮೋದಿ,ಸನಾ ಸೇರಿದಂತೆ ಸನಾ ತಂದೆ,ತಾಯಿ ಮೇಲೆ ದೂರು ದಾಖಲಿಸಿದ್ದಾರೆ.ಸನಾಳ ಅಕ್ಕನ ಗಂಡ ಶೇಖ್ ಮೋದಿ ಜೊತೆ ಸನಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅದರ ಹಿನ್ನೆಲೆ ನನ್ನ ಅಳಿಯ ಫಯಾಜ ಪರವಾಗಿ ಕೌಟುಂಬಿಕ ಕಲಹ ಬಗೆಹರಿಸಲು ಹೋದಾಗ ಈ ರೀತಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದಾರೆಂದು ರಾಜು ತಾಳಿಕೋಟೆ ತಮ್ಮ ಮೇಲೆ ಸನಾ ಕುಟುಂಬಸ್ಥರು ಮಾಡಿದ ಆರೋಪವನ್ನ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪರಾಜು ತಾಳಿಕೋಟೆ ಅವರ ಅಕ್ಕನ ಮಗ ಫಯಾಜ್ ಹೆಂಡತಿ ಸನಾ ಕೂಡ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು, ರಾಜು ತಾಳಿಕೋಟೆ, ಗಂಡ ಫಯಾಜ್ ಸೇರಿದಂತೆ ಹಲವರು ನನ್ನ ಮೇಲೆ ಹಲ್ಲೆಗೈದಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಪತಿಬಫಯಾಜ್ ಅನೈತಿಕ ಸಂಬಂಧ ಹೊಂದಿದ್ದಾನೆ. ಅದನ್ನ ಪ್ರಶ್ನಿಸಿದ್ದಕ್ಕೆ ನನಗೆ ಈ ಶಿಕ್ಷೆ ಎಂದು ದೂರಿದ್ದಾರೆ.ಸದ್ಯ ಎರಡು ಕಡೆಯಿಂದ ದೂರು ದಾಖಲಾಗಿದ್ದು, ಪೊಲೀಸರ ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.Sign in to your account
Username or Email Address


Password

 Remember Me


