ನೆಲಮಂಗಲ: ಬೆಳಗಾವಿಯಿಂದ ಬೆಂಗಳೂರಿನ ಖಸಾಯಿಖಾನೆಗೆ ಸಾಗಾಟ ಆಗ್ತಿದ್ದ ಜಾನುವಾರುಗಳನ್ನು ಭಜರಂಗದಳದವರು ರಕ್ಷಣೆ ಮಾಡಿದ್ದಾರೆ.ಬೆಂಗಳೂರು ಹೊರವಲಯ ನೆಲಮಂಗಲ ನಗರದ ನವಯುಗ ಟೋಲ್ ಬಳಿ ಜಾನುವಾರುಗಳ ತುಂಬಿದ ಲಾರಿ ಸಂಚಾರ ಮಾಡುವ ನಿಖರ ಮಾಹಿತಿ ಮೇರೆಗೆ ಭಜರಂಗದಳದ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ.  ಇದನ್ನೂ ಓದಿ: ಬಸ್ ಪಲ್ಟಿ- ಪ್ರಯಾಣಿಕರಿಗೆ ಗಂಭೀರ ಗಾಯವಾಹನದಲ್ಲಿ ಸುಮಾರು 45 ಜಾನುವಾರುಗಳು ಪತ್ತೆಯಾಗಿವೆ. ಲಾರಿಯಲ್ಲಿದ್ದ ಜಾನುವಾರುಗಳನ್ನು ಲಾರಿ ಸಹಿತ ನೆಲಮಂಗಲ ಟೌನ್ ಪೊಲೀಸರ ವಶಕ್ಕೆ ನೀಡಲಾಗಿದೆ.  ಪೊಲೀಸರ ವಶದಲ್ಲಿದ್ದ ಲಾರಿ ಕೆಲ ಹೊತ್ತಲ್ಲೆ ಹಾಸನ ರಸ್ತೆಯ ಟೋಲ್ ಬಳಿ ಪ್ರತ್ಯಕ್ಷವಾಗಿದ್ದು, ಪೊಲೀಸ್ ಇಲಾಖೆಯೇ ಜಾನುವಾರುಗಳನ್ನು ಸಾಗಾಣೆ ಮಾಡಲು ಸಾಥ್ ಕೊಟ್ಟಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್​ಗಳಿಂದ ಕರೆ  Sign in to your account
Username or Email Address


Password

 Remember Me


