ಹಾಸನ: ಕೃಷಿ ಕೂಲಿಗಾರ 25 ಕುಟುಂಬದವರಿಗೆ ಮನೆಗಳ ಹಕ್ಕುಪತ್ರ ಕೊಡಿಸುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿ ಕಛೇರಿ ಮುಂದೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡಲಾಯಿತು.ಬೇಲೂರು ತಾಲೂಕು, ಕಸಬಾ ಹೋಬಳಿ, ಹೆಗ್ಗಡಿಹಳ್ಳಿ ಗ್ರಾಮದ ಸರ್ವೆ.ನಂ.46ರಲ್ಲಿ, ಗ್ರಾಮದ ಸುಮಾರು 25 ಕೃಷಿ ಕೂಲಿಗಾರ ಕುಟುಂಬಗಳು ಕಳೆದ 40 ವರ್ಷಗಳಿಂದಲೂ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ಅಲ್ಲಿರುವ ಬಡ ಕೂಲಿಗಾರ ಕುಟುಂಬದವರಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ಕೂಡಲೇ ಈ ಕಡೆ ಗಮನಹರಿಸಿ ಬಡ ಜನರಿಗೆ ಮನೆಗಳ ಹಕ್ಕುಪತ್ರವನ್ನು ಹಾಗೂ ಸರ್ಕಾರದ ಇನ್ನಿತರೆ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಇದನ್ನೂ ಓದಿ:  ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಳ್ಳೂರು ಸ್ವಾಮೀಗೌಡ, ವಿಕ್ಟರ್, ಬೋಗಳೇಶ್, ಬಸವರಾಜು, ಸಚೀನ್, ಕೃಷ್ಣ, ಅಣ್ಣಪ್ಪ, ಸಂತೋಷ್, ಪ್ರಕಾಶ್ ಇತರರು ಪಾಲ್ಗೊಂಡಿದ್ದರು. ಇದನ್ನೂ ಓದಿ:  ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್- 8 ಜನರು ಅರೆಸ್ಟ್Sign in to your account
Username or Email Address


Password

 Remember Me


