ತುಮಕೂರು: ಮಹಿಳೆಯೊಬ್ಬರು ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಂದು ಶವವನ್ನು ಚರಂಡಿಗೆ ಎಸೆದ ಘಟನೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ನಡೆದಿದೆ.ನಾರಾಯಣ್(52) ಮೃತ ದುರ್ದೈವಿ. ನಾರಾಯಣ್ ಪತ್ನಿ ಅನ್ನಪೂರ್ಣ ಈ ಗಂಭೀರ ಕೊಲೆ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ ಅನ್ನಪೂರ್ಣ ಅವರಿಗೆ ಅಕ್ರಮ ಸಂಬಂಧ ಇತ್ತು. ಇದೇ ವಿಚಾರಕ್ಕೆ ನಾರಾಯಣ್ ಮತ್ತು ಅನ್ನಪೂರ್ಣ ಅವರ ನಡುವೆ ಪ್ರತಿನಿತ್ಯ ಜಗಳ ಆಗುತ್ತಲೇ ಇತ್ತು. ಅನ್ನಪೂರ್ಣ ಇದೇ ವಿಚಾರಕ್ಕೆ ಗಂಡನನ್ನು ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಬಂದಿದೆ.  ಇದನ್ನೂ ಓದಿ: ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ: ಸುಧಾಕರ್ಮೃತ ನಾರಾಯಣ್ ನೆಲಮಂಗಲ ಬಳಿಯ ಟೋಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ತುಮಕೂರು ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನ್ನಪೂರ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


