ಬಳ್ಳಾರಿ: ಕುಚುಕು ಗೆಳೆಯರು ಎಂದೇ ಹೆಸರಾಗಿರೋ ಮಾಜಿ ಸಚಿವ ಜನಾರ್ದನ ರೆಡ್ಡಿ   ಹಾಗೂ ಸಚಿವ  ಶ್ರೀರಾಮುಲು ಅವರು ಗಣೇಶ ಹಬ್ಬದ ಸಂಭ್ರಮದ ಸಂಭ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಫುಲ್ ವೈರಲ್ ಆಗಿದೆ.ಜನಾರ್ದನ ರೆಡ್ಡಿ ಅವರ ಮನೆಯ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಕುಚುಕು ದೋಸ್ತಿಗಳು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ರೆಡ್ಡಿ ಮನೆಯಲ್ಲಿ ಪರಿಸರ ಸ್ನೇಹಿ ಗಣಪನ ಇಟ್ಟು ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ, ನಿನ್ನೆ ರಾತ್ರಿ ರೆಡ್ಡಿ ನಿವಾಸದಲ್ಲಿನ ಬಾವಿಯಲ್ಲಿ ಪರಿಸರ ಸ್ನೇಹಿ ಗಣೇಶನ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಿದ್ದಾರೆ. ಇದನ್ನೂ ಓದಿ: ಸುಮ್ಮನಿರು ಎಂದಿದ್ದಕ್ಕೆ ಲಾಕಪ್‍ನಲ್ಲೇ ಬಟ್ಟೆ ಬಿಚ್ಚಿದ ಆರೋಪಿಈ ವೇಳೆ ಇಬ್ಬರೂ ಗೆಳೆಯರು ವೈಟ್ ಅಂಡ್ ವೈಟ್ ಪಂಚೆ, ಅಂಗಿ ತೊಟ್ಟಿದ್ದಾರೆ. ಅಲ್ಲದೇ ಕೈ ಕೈ ಹಿಡಿದು ಫೋಟೋ ತೆಗೆಸಿಕೊಂಡು ಸಂತಸ ಪಟ್ಟಿದ್ದಾರೆ. ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದು ಬಳ್ಳಾರಿಗೆ ಬಂದಿದ್ದು, ಈಗ ಗಣೇಶನ ಹಬ್ಬವನ್ನು ಗೆಳೆಯನೊಂದಿಗೆ ಸಂಭ್ರಮಿಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಸಹ ಜೊತೆಗಿದ್ದರು. ಈ ಕುಚುಕು ಗೆಳೆಯರ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.Sign in to your account
Username or Email Address


Password

 Remember Me


