ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಹಾರ್ನೋಡ ಗ್ರಾಮದಲ್ಲಿ ನಿಧಿಯ ಆಸೆಗಾಗಿ ಪ್ರಾಚೀನ ಕಾಲದ ಶಿವನ ದೇವಾಲಯದ ಮೂರ್ತಿಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ.ದೇವಸ್ಥಾನವು ಪ್ರಾಚೀನ ಕಾಲದ್ದಾಗಿದ್ದು, ಸುಂದರ ಕಲ್ಲಿನ ಕೆತ್ತನೆ, ಶಿವನ ಲಿಂಗ ವಿಶೇಷವಾಗಿದೆ. ಇಡೀ ದೇವಸ್ಥಾನ ಕಲ್ಲಿನಿಂದ ನಿರ್ಮಾಣವಾಗಿದೆ. ದೇವಸ್ಥಾನ ದಟ್ಟ ಅರಣ್ಯದಲ್ಲಿ ಇರುವುದರಿಂದ ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿಲ್ಲ. ಇದರ ಲಾಭ ಪಡೆದ ನಿಧಿ ಕಳ್ಳರು, ಈಶ್ವರ ಲಿಂಗ ಪೀಡವನ್ನು ಕಿತ್ತು ಹಾಳು ಮಾಡಿ ತಳಭಾಗದಲ್ಲಿ ಅಗೆದಿದ್ದಾರೆ. ಈಶ್ವರ ಲಿಂಗಕ್ಕೂ ಘಾಸಿ ಮಾಡಿದ್ದು, ಲಿಂಗವೂ ಎರಡು ತುಂಡಾಗಿದೆ. ಇಲ್ಲಿನ ಕೆಲವು ಮೂರ್ತಿಗಳಿಗೂ ಹಾನಿಮಾಡಿದ್ದಾರೆ. ಇದನ್ನೂ ಓದಿ: ಕಬಿನಿ ಫಾರೆಸ್ಟ್‌ನಲ್ಲಿ  ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್ಘಟನೆ ನಡೆದಿರುವುದು ಇದೀಗ ಸ್ಥಳೀಯ ಜನರಿಗೆ ತಿಳಿದಿದ್ದು, ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಸುಧಾಕರ್ ರೆಡ್ಡಿ ಆಗಮಿಸಿ ವೀಕ್ಷಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಇಲ್ಲಿನ ದೇವಸ್ಥಾನಗಳ ಬಗ್ಗೆ ಅಧ್ಯಯನ ನೆಡೆಯಬೇಕು, ಈ ರೀತಿಯ ಪುರಾತನ ದೇವಸ್ಥಾನವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಿ, ಜನರಿಗೆ ಇತಿಹಾಸದ ಮಹತ್ವ ಅರಿಯಲು ಇಂತಹ ಪ್ರದೇಶವನ್ನು ಪ್ರವಾಸಿ ಸ್ಥಳವಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


