ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಕಿಚ್ಚ ಸುದೀಪ್ ಜೀಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಲವು ದಿನಗಳ ಬಳಿಕ ಮತ್ತೆ ವರ್ಕೌಟ್ ಶುರು ಮಾಡುತ್ತಿರುವ ಕಿಚ್ಚ ಫೋಟೋದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.ಪೈಲ್ವಾನ್ ಚಿತ್ರದ ಮೂಲಕ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಸಿಕ್ಸ್ ಪ್ಯಾಕ್‍ನಲ್ಲಿ ಮಿಂಚಿದ್ದ ಸುದೀಪ್, ಅಂದಿನಿಂದ ತಮ್ಮ ಫಿಟ್‍ನೆಸ್‍ನನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಸಮಯ ಸಿಕ್ಕಗಲೆಲ್ಲಾ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಸುದೀಪ್ ಕೆಲವು ತಿಂಗಳ ಹಿಂದೆ ಅನಾರೋಗ್ಯ ಕಾರಣ ಜೀಮ್‍ನಿಂದ ದೂರ ಸರಿದಿದ್ದರು. ಇದೀಗ ಸುದೀಪ್ ಮತ್ತೆ ವರ್ಕೌಟ್‍ನತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಭಾರತಾಂಬೆಯ ದೇಗುಲ- ಮಕ್ಕಳಲ್ಲಿ ದೇಶಾಭಿಮಾನ ತುಂಬುವ ಕೆಲಸಸುದೀಪ್ ಜೀಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ತಮ್ಮ ಬೈಸೆಪ್ಸ್‌ನನ್ನು ತೋರಿಸುತ್ತಾ, ಖಡಕ್ ಲುಕ್ ನೀಡಿದ್ದಾರೆ. ಅಲ್ಲದೇ ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಕೂಡ ಖಂಡಿತ ಅದು ಹೆಚ್ಚು ತಿಂಗಳ ಕಾಲ ಪರಿಣಾಮ ಬೀರುತ್ತದೆ. ವರ್ಕೌಟ್‍ನಿಂದ ನಾನು ಪಡೆದ ಸಂತೋಷವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ದಿನಚರಿಯನ್ನು ಪುನಾರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ಅಗತ್ಯದ ಸಮಯದಲ್ಲಿ ಸಹಾಯ ಮಾಡಿದ ವೈದ್ಯರು, ತರಬೇತುದಾರರಿಗೆ, ಕುಟುಂಬವರಿಗೆ ಮತ್ತು ನನ್ನ ಸ್ನೇಹಿತರಿಗೆ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ- ಫುಲ್ ಟ್ರಾಫಿಕ್, ಪೊಲೀಸರ ಜೊತೆ ಪ್ರವಾಸಿಗರ ವಾಗ್ವಾದC+ surely affects big time for months,even post recovery.
Been trying to get bk to what I have enjoyed doin,,” Workouts”.
Feels good to get goin wth my routine.
Tnx to my docs,trainers,family n frnzz fo the support at a time when I needed it the most.
Love and hugs .
????❤???????? pic.twitter.com/5VprDYOV9k— Kichcha Sudeepa (@KicchaSudeep) September 12, 2021ಇತ್ತೀಚೆಗಷ್ಟೇ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಟೀಸರ್‍ನನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಟೀಸರ್‌ನಲ್ಲಿ ಸುದೀಪ್ ಬ್ಲಾಕ್ ಕಲರ್ ಲಾಂಗ್ ಜಾಕೆಟ್ ಹಾಗೂ ಕ್ಯಾಪ್ ತೊಟ್ಟು ಮಳೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಈ ಟೀಸರ್ ಕಿಚ್ಚ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಬಿಗ್ ಸ್ಕ್ರೀನ್‍ನಲ್ಲಿ ಸುದೀಪ್‍ರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


