ಬೆಂಗಳೂರು: ರಾಜ್ಯದಲ್ಲಿ ಇಂದು 801 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 15 ಜನರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಪಾಸಿಟಿವಿಟಿ ರೇಟ್ ಶೇ.0.67ಕ್ಕೆ ತಲುಪಿದೆ.ಇಂದು 1,142 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 16,672 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಟ್ಟು 29,60,932 ಜನರಿಗೆ ಸೋಂಕು ತಗುಲಿದೆ. 29,06,746 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.67ಕ್ಕೆ ತಲುಪಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.87ರಷ್ಟಿದೆ. ಇದನ್ನೂ ಓದಿ: ಕೊಡಗಿನಲ್ಲಿ ವ್ಯಾಕ್ಸಿನ್ ಪಡೆದ 953 ಮಂದಿಗೆ ಮತ್ತೆ ಕೊರೊನಾಒಟ್ಟು 1,19,503 ಸ್ಯಾಂಪಲ್ (ಆರ್ ಟಿ ಪಿಸಿಆರ್ 1,02,312 + 17,191 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 207 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಮರಣ ಹೊಂದಿದ್ದಾರೆ. 285 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ರಾಮನಗರ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 1, ಬಳ್ಳಾರಿ 4, ಬೆಳಗಾವಿ 93, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 207, ಬೀದರ್ 2, ಚಾಮರಾಜನಗರ 6, ಚಿಕ್ಕಮಗಳೂರು 39, ಚಿತ್ರದುರ್ಗ 2, ದಕ್ಷಿಣ ಕನ್ನಡ 133, ದಾವಣಗೆರೆ 8, ಧಾರವಾಡ 1, ಹಾಸನ 17, ಕಲಬುರಗಿ 6, ಕೊಡಗು 59, ಕೋಲಾರ 2, ಕೊಪ್ಪಳ 1, ಮಂಡ್ಯ 12, ಮೈಸೂರು 47, ರಾಯಚೂರು 2, ಶಿವಮೊಗ್ಗ 30, ತುಮಕೂರು 26, ಉಡುಪಿ 86 ಮತ್ತು ಉತ್ತರ ಕನ್ನಡದಲ್ಲಿ 11 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.Sign in to your account
Username or Email Address


Password

 Remember Me


