ತುಮಕೂರು: ಭಾರತದಲ್ಲಿ ಬುರ್ಕಾ ನಿಷೇಧ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೊಗಡು ಶಿವಣ್ಣ ಅವರು ಕೆಲದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಸಂಸ್ಕೃತಿಯಲ್ಲಿ ಯಾವತ್ತು ಬುರ್ಕಾ ಇರಲಿಲ್ಲ. ಮೊದಲು ಆ ಬುರ್ಕಾ ನಿಷೇಧ ಮಾಡಬೇಕು. ಈ ಕಾನೂನು ಬೇಡ ಎಂದರೆ ಅವರು ತಾಲಿಬಾನಿಗಳು ಎಂದಿದ್ದರು. ಈ ರೀತಿ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವರು ತಮ್ಮ ಪೈಶಾಚಿಕ ಮನಸ್ಸನ್ನು ಸೀಮಿತದಲ್ಲಿ ಇಡದೆ ಈ ರೀತಿ ಮಾತನಾಡಿದ್ದಾರೆ. ಧಾರ್ಮಿಕ ಭಾವನೆ ಹಾನಿ ಮಾಡುವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸೊಗಡು ಶಿವಣ್ಣ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬುರ್ಹಾನ್ ಎಂಬವರು ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಶಿಷ್ಯ ಸಂತೋಷ್ ಲಾಡ್ ಅಸಮಾಧಾನಜಮೀರ್ ಕೂಡ ಒಂಥರಾ ತಾಲಿಬಾನ್:
ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ತಾಲಿಬಾನಿಗಳಿದ್ದು, ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಒಂಥರಾ ತಾಲಿಬಾನೇ ಎಂದು ಕೆಲದಿನಗಳ ಹಿಂದೆ ಸೊಗಡು ಶಿವಣ್ಣ ಸ್ಫೋಟಕ ಹೇಳಿಕೆ ನೀಡಿದ್ದರು. ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದ್ದ ಪ್ರಕರಣದಲ್ಲಿ ಕೆಲವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ. ಈ ತಾಲಿಬಾನಿಗಳು ಪೊಲೀಸ್ ಠಾಣೆಗೆ ನುಗ್ಗಿ ಹೊಡಿದಿದ್ದು ಮರೆತು ಹೋಯಿತಾ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಜಮೀರ್ ಕೂಡ ಒಂಥರಾ ತಾಲಿಬಾನ್: ಸೊಗಡು ಶಿವಣ್ಣ






 Advertisement 




Sign in to your account
Username or Email Address


Password

 Remember Me


