ಧಾರವಾಡ: ಕಲಬುರಗಿ ಪಾಲಿಕೆ ಗದ್ದುಗೆ ಏರುವ ವಿಚಾರವಾಗಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಎಲ್ಲಿ ಬಹುಮತ ಇರಲ್ಲ ಅಲ್ಲಿ ಗುದ್ದಾಟ ಇದ್ದೇ ಇರುತ್ತೆ ಎಂದಿದ್ದಾರೆ.ಈ ಗುದ್ದಾಟದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಏನು ಮಾಡಬೇಕೋ ಎಲ್ಲ ತಂತ್ರಗಾರಿಕೆಯನ್ನ ಅದಕ್ಕೆ ಬೇಕಾದ ಕಾರ್ಯ ಚಟುವಟಿಕೆಗಳನ್ನ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಮಾಡ್ತಾರೆ ಎಂದರು. ಅಲ್ಲಿ ಯಾರ ಜೊತೆ ಯಾರು ದೊಸ್ತಿ ಆಗುತ್ತೆ ಎನ್ನುವುದು ಹೇಳಲು ಅಧಿಕೃತ ವ್ಯಕ್ತಿ ನಾನಲ್ಲ, ಆದರೆ ರಾಜಕಾರಣದಲ್ಲಿ ಯಾರು ಮಿತ್ರರಲ್ಲ, ಯಾರೂ ಶತ್ರು ಅಲ್ಲ ಎಂದರು.ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿರುವ ಜೋಶಿ, ಯಾರನ್ನ ಮೇಯರ್ ಮಾಡಬೇಕು ಎಂದು ಗೆಜೆಟ್ ನೋಟಿಫಿಕೆಷನ್ ಆಗಬೇಕು, ಚುನಾವಣೆ ಪ್ರಕ್ರಿಯೆ ಆಗಬೇಕು, ಮಾಡುವುದಕ್ಕಿಂತ ಮೊದಲು ನಿಮ್ಮನ್ನ ಹೇಳಿ ಮಾಡುತ್ತೆವೆ ಎಂದು ಹೇಳಿದರು. ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್‍ಗೆ ಮೇಯರ್ ಗಿರಿ..?Sign in to your account
Username or Email Address


Password

 Remember Me


