ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿಯ ಎಲ್ಲಮ್ಮನ ಹಳ್ಳಕ್ಕೆ ನಿರ್ಮಾಣವಾಗಿರುವ ನೂತನ ಸೇತುವೆ ಮೇಲೆ ಕಾರೊಂದು ಅಪಘಾತವಾಗಿದ್ದು, ಕಾರ್ ನಲ್ಲಿ ಇದ್ದ ಭಾವಿ ದಂಪತಿ ಮರಣಹೊಂದಿದ್ದಾರೆ. ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದು ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.ಕುರುಗೋಡಿನ ವೈದ್ಯ ಕುಪಕಡ್ಡಿ ಅವರ ಮೊಮ್ಮಗ ವಿನಯ್(30) ಮತ್ತು ಕುರುಗೋಡು ತಾಲೂಕಿನ ಹೆಚ್ ವೀರಾಪುರ ಗ್ರಾಮದ ಸೌಜನ್ಯ(24) ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಹಿರಿಯರ ಅಣತಿಯಂತೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮುಗಿಸಿಕೊಂಡಿದ್ದರು. ಇಬ್ಬರಿಗೂ ವಿವಾಹ ನಿಶ್ಚಿತಾರ್ಥವಾಗಿದ್ದರಿಂದ ವಿನಯ್ ಕಾರಿನಲ್ಲಿ ಮಂತ್ರಾಲಯಕ್ಕೆ ಹೋಗಿ ವಾಪಸ್ ಬರುವಾಗ ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿಯಾಗಿ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲನೆ ಮಾಡುತ್ತಿದ್ದ ವಿನಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರಸೌಜನ್ಯ ತಲೆ ಮತ್ತು ಮುಖಕ್ಕೆ ತೀವ್ರ ರಕ್ತ ಗಾಯಗಳಾಗಿದ್ದರಿಂದ ಆಕೆಯನ್ನು ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಾಲಿಬಾನಿಗಳ ಕ್ರೂರತ್ವ- ಮನೆ, ಮನೆಗೆ ನುಗ್ಗಿ ಯುವಕರ ಬರ್ಬರ ಹತ್ಯೆSign in to your account
Username or Email Address


Password

 Remember Me


