ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರವಾಗಿ ಸಂತ್ರಸ್ತೆಯರು ಪೊಲೀಸರು ಹಾಗೂ ಎಸ್‍ಐಟಿ ಮುಂದೆ ಬಂದು ದೈರ್ಯವಾಗಿ ಹೇಳಿಕೊಳ್ಳಬೇಕು. ಈ ಹಿಂದೆಯೇ ಅವರಿಗೆ ರಕ್ಷಣೆ ಕೊಡುವುದಾಗಿ ಹೇಳಿದ್ದೇವೆ ಎಂದು ಗೃಹಸಚಿವ ಜಿ.ಪರಮೇಶ್ವರ್ (G Parameshwa) ಹೇಳಿದ್ದಾರೆ.ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರು ನಿನ್ನೆ ರಾತ್ರಿ ಸುಮಾರು 12:50ರ ಸುಮಾರಿಗೆ ಜರ್ಮನಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅವರ ವಿರುದ್ಧ ಬಂಧನದ ವಾರಂಟ್ ಇತ್ತು. ಈಗ ಅವರ ಬಂಧನವಾಗಿದೆ (Prajwal Revanna Arrested) ಎಂಬ ವಿಚಾರ ಗೊತ್ತಾಗಿದೆ. ಅಧಿಕಾರಿಗಳು ಅವರ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅಧಿಕಾರಿಗಳಿಗೆ ಅವರು ಸಹಕಾರ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಸಹಜವಾಗಿಯೇ ಅವರು ತನಿಖೆಗೆ ಸಹಕಾರ ಕೊಡಬೇಕು ಎಂದಿದ್ದಾರೆ.ಬಂಧನ ವಿಳಂಬವಾಯ್ತು ಎಂಬ ಪತ್ರಕರ್ತರ ಪ್ರಶ್ನೆಗೆ, ನಮ್ಮ ದೇಶದಲ್ಲೇ ಅಥವಾ ರಾಜ್ಯದಲ್ಲಿಯೇ ಇದ್ದಿದ್ದರೆ ಇಷ್ಟರಲ್ಲೇ ಬಂಧನ ಮಾಡಬಹುದಿತ್ತು. ಹೊರ ದೇಶದಲ್ಲಿ ಇದ್ದರು, ಅಲ್ಲಿಗೆ ನಮ್ಮ ಇನ್ಸ್‌ಪೆಕ್ಟರ್‌ನ್ನು ಕಳುಹಿಸಿ ಬಂಧಿಸಲು ಸಾಧ್ಯವಿರಲಿಲ್ಲ. ರಿಸಲ್ಟ್ ಬೇರೆ ರೀತಿ ಆದರೆ, ಅವರ ರಾಜತಾಂತ್ರಿಕ ಪಾಸ್‍ಪೋರ್ಟ್ ರದ್ದಾಗುತ್ತೆ. ಅದೆಲ್ಲಾ ತಿಳಿದುಕೊಂಡು ಅವರೇ ಮರಳಿ ಬಂದಿರಬಹುದು ಎಂದು ಅವರು ಹೇಳಿದ್ದಾರೆ.ಸಾಕ್ಷ್ಯನಾಶ, ಮೊಬೈಲ್ ಕಳೆದು ಹೋಗಿದೆ ಎಂದು ಪ್ರಜ್ವಲ್ ಹೇಳುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ, ಯಾವುದೋ ಮೂಲದಿಂದ ಬಂದರೆ ಆ ಮಾಹಿತಿಯನ್ನು ನಂಬಲು ಸಾಧ್ಯವಿಲ್ಲ. ಆ ವಿಚಾರ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.ಇದಕ್ಕೂ ಮುನ್ನ ಪರಮೇಶ್ವರ್ ನಿವಾಸಕ್ಕೆ ನಗರ ಪೊಲೀಸ್ ಕಮಿಷನರ್ ದಯಾನಂದ್ ಭೇಟಿ ನೀಡಿ, ಪ್ರಜ್ವಲ್ ಬಂಧನದ ಬಗ್ಗೆ ಮಾಹಿತಿ ನೀಡಿದ್ದರು.Sign in to your account
Username or Email Address


Password

 Remember Me


